– ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ
ಚೆನ್ನೈ: ಕೊರೊನಾ ವೈರಸ್ ಭಯದಿಂದ ವಿದೇಶದಿಂದ ಬಂದಂತಹವರು ಸೀಲ್ ಹಾಕಿಸಿಕೊಂಡು ಸ್ವತಃ ಗೃಹಬಂಧನಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ಅನೇಕ ನಟ-ನಟಿಯರು ಶೂಟಿಂಗ್ ಕ್ಯಾನ್ಸಲ್ ಮಾಡಿ ಸ್ವತಃ ಗೃಹಬಂಧನ ವಿಧಿಸಿಕೊಳ್ಳುತ್ತಿದ್ದಾರೆ. ಇದೀಗ ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಪುತ್ರ ಕೂಡ ತಾವೇ ಗೃಹ ಬಂಧನಕ್ಕೆ ಒಳಗಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸುಹಾಸಿನಿ ಪುತ್ರ ನಂದನ್ ಮಣಿರತ್ನಂ ಇಂಗ್ಲೆಂಡ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಕೊರೊನಾ ವೈರಸ್ ವಿದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಎಲ್ಲರೂ ವಿದೇಶದಿಂದ ವಾಪಸ್ ಬರುತ್ತಿದ್ದಾರೆ. ಅದೇ ರೀತಿ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ವಾಪಸ್ ಆಗಿದ್ದಾರೆ.
ವಿದೇಶದಿಂದ ವಾಪಸ್ ಬರುವ ಪ್ರತಿಯೊಬ್ಬರ ಕೈಗೂ ‘Home Quarantained’ ಸ್ಟ್ಯಾಂಪ್ ಹಾಕಲಾಗುತ್ತಿದೆ. ಅವರು ಎಲ್ಲಿಯೂ ಓಡಾಡದೆ ಸ್ವಯಂ ನಿರ್ಬಂಧದಲ್ಲಿ ಇರಬೇಕು. ಹಾಗಾಗಿ ವಿದೇಶದಿಂದ ವಾಪಸ್ ಆದ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ಈಗ ಗೃಹ ಬಂಧನದಲ್ಲಿ ಇದ್ದಾರೆ.
https://www.instagram.com/p/B-BNscOjhFx/
ನಟಿ ಸುಹಾಸಿನಿ ಪ್ರತ್ಯೇಕ ವಾಸ ಮಾಡುತ್ತಿರುವ ಮಗನೊಂದಿಗೆ ಮಾತನಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಎಲ್ಲರಿಗೂ ನಮಸ್ತೆ, ನನ್ನ ಮಗ ನಂದನ್ ಮಣಿರತ್ನಂ ಲಂಡನ್‍ನಿಂದ ಮಾರ್ಚ್ 18ರಂದು ವಾಪಸ್ ಬಂದಿದ್ದು, ಅಂದಿನಿಂದ ಗೃಹಬಂಧನಲ್ಲಿದ್ದಾನೆ ಎಂದು ಮಗನೊಂದಿಗೆ ಹೊರಗಡೆ ನಿಂತು ಮಾತನಾಡಿದ್ದಾರೆ. ನಂತರ ನಂದನ್ ಮಾತನಾಡಿ, ‘ನಾನು ಕಳೆದ ಐದು ದಿನಗಳಿಂದ ಮನೆಯಲ್ಲಿ ಒಂದು ರೂಮಿನಲ್ಲಿ ಇದ್ದೇನೆ. ನಾನು ರೂಮಿನಿಂದ ಹೊರಗೆ ಬರುತ್ತಿಲ್ಲ. ಬುಧವಾರದಿಂದ ಗೃಹ ಬಂಧನದಲ್ಲಿದ್ದೇನೆ. ಈಗಾಗಲೇ ಐದು ದಿನಗಳು ಕಳೆದಿವೆ. ಇನ್ನೂ 9 ದಿನ ಹೀಗೆ ಇರುತ್ತೇನೆ. ಇದರಿಂದ ನನಗೆ ಬೋರ್ ಆಗುತ್ತದೆ. ಆದರೆ ಪ್ರತಿಯೊಬ್ಬರ ರಕ್ಷಣೆ ಮುಖ್ಯ’ ಎಂದಿದ್ದಾರೆ.
ನಂದನ್‍ಗೆ ಯಾವುದೇ ರೀತಿಯ ಕೊರೊನಾ ವೈರಸ್ ಲಕ್ಷಣಗಳಿಲ್ಲ. ಆದರೂ 14 ದಿನಗಳವರೆಗೂ ಈ ರೀತಿ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ. ಇನ್ನೂ ನಂದನ್‍ಗೆ ರೂಮ್ ಬಳಿ ಊಟ ಇಡಲಾಗುತ್ತದೆ. ಊಟ ಆದ ಬಳಿಕ ತಟ್ಟೆಯನ್ನು ಬಿಸಿ ನೀರಿನಲ್ಲಿ ತೊಳೆಯುತ್ತಿದ್ದಾರೆ. ಅಲ್ಲದೇ ಅವರಿಗೆ ಊಟ ನೀಡಿದವರು ಕೂಡ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುತ್ತಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.