ಬೆಂಗಳೂರು: ಇತ್ತೀಚಿಗಷ್ಟೇ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಇದರ ಬೆನ್ನಲ್ಲೆ ಈಗ ಸಿಬಿಎಸ್‍ಇ 12ನೇ ತರಗತಿಯ ಫಲಿತಾಂಶ ಕೂಡ ಹೊರಬಿದ್ದಿದೆ. ಈ ಪರೀಕ್ಷೆಯಲ್ಲಿ ನಟಿ ಸುಧಾರಾಣಿ ಪುತ್ರಿ ಅತಿಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಸುಧಾರಾಣಿ ಮಗಳು ನಿಧಿ ಸಿಬಿಎಸ್‍ಇ ಪರೀಕ್ಷೆಯಲ್ಲಿ 96.4% ಮಾರ್ಕ್ಸ್ ಪಡೆದಿದ್ದು, ಈ ಮೂಲಕ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಈ ಸಂತೋಷವನ್ನು ನಟಿ ಸುಧಾರಾಣಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
“ಇದು ನಮ್ಮ ಜೀವನದಲ್ಲಿ ತುಂಬಾ ಸಂತೋಷದ ಸಮಯವಾಗಿದೆ. ನಮ್ಮ ಸುಬ್ಬಿಕುಟ್ಟಿ ತನ್ನ 12ನೇ ತರಗತಿ ಸಿಬಿಎಸ್‍ಇ ಪರೀಕ್ಷೆಯಲ್ಲಿ 96.4% ಅಂಕ ಪಡೆದುಕೊಂಡಿದ್ದಾಳೆ. ಈ ಮೂಲಕ ಅವಳು ಶಾಲೆಗೆ ಎರಡನೇ ಟಾಪರ್ ಆಗಿದ್ದಾಳೆ. ನಿಮ್ಮ ಪ್ರೀತಿ, ಆಶೀರ್ವಾದ ಸದಾ ಹೀಗೆ ಇರಲಿ, ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಜೊತೆಗೆ ಸುಧಾರಾಣಿ ಮತ್ತು ಪತಿ ಗೋವರ್ಧನ್ ಇಬ್ಬರೂ ನಿಧಿಯನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಮಗಳು ಶಾಲೆ ಮುಗಿಸಿದ ನಂತರ ಕುಟುಂಬವೂ ವಿದೇಶಿ ಪ್ರವಾಸ ತೆರಳಿದ್ದರು.
https://www.instagram.com/p/Bw9kzZVnV_l/