ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ (Suchitra Krishnamoorthi) ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್‌ವೊಂದು ಸದ್ದು ಮಾಡುತ್ತಿದೆ. ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ತಮಗಾದ ಕಹಿ ಅನುಭವವನ್ನು ಗಾಯಕಿ ಸುಚಿತ್ರಾ ಹಂಚಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಇರಲಾರದೆ 20 ನಿಮಿಷಕ್ಕೆ ಓಡಿ ಬಂದೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ
ಸುಚಿತ್ರಾ ಕೃಷ್ಣಮೂರ್ತಿ ಎಕ್ಸ್‌ನಲ್ಲಿ ಘಟನೆ ಹಂಚಿಕೊಂಡಿದ್ದು, ಬಾಡಿ ಪಾಸಿಟಿವಿಯಿಂದ ಬರ್ಲಿನ್‌ನಲ್ಲಿ ನಡೆದ ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದೆ. ಭಾಗಿಯಾದ ಬಳಿಕ ತಲೆ ಕೆಡುವಷ್ಟು ಓಪನ್ ಆಗಿರಬೇಡಿ ಎಂಬ ಮಾತು ನೆನಪಾಯ್ತು. ಅಲ್ಲಿಂದ ಓಡೋಡಿ ಬಂದೆ. ಈ ಪಾರ್ಟಿಯಿಂದ ಬಂದ ತಕ್ಷಣ ಸ್ನಾನ ಮಾಡಿ ವಿಶ್ರಾಂತಿ ಪಡೆದು ಗಾಯತ್ರಿ ಮಂತ್ರ ಪಠಿಸಿದೆ ಎಂದು ಹೇಳಿಕೊಂಡಿದ್ದಾರೆ.
Just attended a body positivity/ naked party in Berlin.
Reminded me of the quote : dont be so open minded that ur brains fall out.
Desi girl forever. Need a sĥower & some gayatri mantra chanting . Baapre ????
— Suchitra Krishnamoorthi (@suchitrak) July 13, 2024
ಈ ಕುರಿತು ಸುಚಿತ್ರಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬರ್ಲಿನ್‌ನಲ್ಲಿ ಇದು ತುಂಬಾ ಅಂದರೆ ತುಂಬಾ ಸಾಮಾನ್ಯ ವಿಷಯವಾಗಿದೆ. ದೇಹದ ಕುರಿತು ಪಾಸಿಟಿವಿಟಿ ಬೆಳೆಸಿಕೊಳ್ಳಲು ಉತ್ತೇಜನ ನೀಡುವುದು ಇದರ ಉದ್ದೇಶ. ಈ ಕುರಿತು ಕೇಳಿದಾಗ, ನೋಡುವ, ಜೀವನದಲ್ಲಿ ಒಂದು ಅನುಭವ ಆಗಲಿ ಎಂದುಕೊಂಡೆ. ಸ್ನೇಹಿತರೊಬ್ಬರ ಸ್ನೇಹಿತರಿಗೆ ಸೇರಿದ ಬಾರ್‌ವೊಂದರಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ನಾನು ಕೂಡ ಅತಿಥಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದೆ. ಅಲ್ಲಿಗೆ ಹೋಗಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಾನು ತುಂಬಾ ದೇಸಿ ಹುಡುಗಿ. ಇನ್ನೊಬ್ಬರ ಖಾಸಗಿ ಭಾಗಗಳನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಸುಚಿತ್ರಾ ಕೃಷ್ಣಮೂರ್ತಿ ಹೇಳಿದ್ದಾರೆ.
ಅಲ್ಲಿನ ಪರಿಸರಕ್ಕೆ ಅದು ಉತ್ತಮ. ಇದು ಮೋಜು ಮತ್ತು ಸಕಾರಾತ್ಮಕ ವಿಷಯವಾಗಿದೆ. ಇದು ಅಶ್ಲೀಲವೂ ಅಲ್ಲ. ಆದರೆ ಭಾರತೀಯರಾದ ನಮಗೆ ಅದು ಸೂಕ್ತವಲ್ಲ. ನಮ್ಮ ದೇಹದ ಕುರಿತು ಸಾಕಷ್ಟು ಜಾಗೃತರಾಗಿರುವಂತೆ ಬೆಳೆಸಲಾಗಿದೆ. ಅಲ್ಲಿನವರಿಗೆ ಇದು ಸಾಮಾನ್ಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿಯಿಂದ ಬೆಳಗಿನ ತನಕ ಆಯೋಜಿಸಲಾದ ಪಾರ್ಟಿ ಅದಾಗಿತ್ತು. ಆದರೆ, ನನಗೆ ಅಲ್ಲಿ ಸುಮಾರು 20 ನಿಮಿಷ ಇರುವುದು ಕಷ್ಟವಾಯ್ತು. ಜೀವನದಲ್ಲಿ ಒಂದು ಹೊಸ ಅನುಭವವಾಯ್ತು. ನಾನು ದೇಸಿ ಹುಡುಗಿ, ಇದು ನಮಗೆ ಸರಿ ಹೊಂದಲ್ಲ ಎಂದು ಗಾಯಕಿ ಸುಚಿತ್ರಾ ಮಾತನಾಡಿದ್ದಾರೆ.
ಅಂದಹಾಗೆ, 90ರ ದಶಕದಲ್ಲಿ ಮಿಂಚಿದ ನಟಿ ಇವರು. 1994ರಲ್ಲಿ ಬಿಡುಗಡೆಯಾದ ‘ಕಭಿ ಹಾನ್ ಕಭಿ ನಾ’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಸುಚಿತ್ರಾ ಕೃಷ್ಣಮೂರ್ತಿ ನಟಿಸಿದರು. ಈ ಚಿತ್ರ ಅವರಿಗೆ ಜನಪ್ರಿಯತೆ ನೀಡಿತ್ತು. ಬಳಿಕ ನಟನೆ ಜೊತೆ ಗಾಯಕಿಯೂ ಗುರುತಿಸಿಕೊಂಡಿದ್ದಾರೆ.