ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾರಿಂದ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಶೃತಿ ಹರಿಹರನ್ ಆರೋಪ ಮಾಡಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಅರ್ಜುನ್ ಪರವಾಗಿ ಸಾಕಷ್ಟು ಜನ ಬ್ಯಾಟ್ ಬೀಸಿದ್ದರು. ಈಗ ಶೃತಿ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.
ನನಗಾದ ಲೈಂಗಿಕ ಕಿರುಕುಳ ಇಲ್ಲಿ ತಪ್ಪಾಗಿ ತೋರಿಸಲಾಗುತ್ತಿದೆ ಹಾಗೂ ಹಲವರು ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈಗ ನಿಜವಾದ ಸತ್ಯ ಕಳೆದು ಹೋಗಿದೆ. ನನಗೆ ಹಾಗೂ ಅರ್ಜುನ್ ಸರ್ಜಾ ಅವರಿಗೆ ಮಾತ್ರ ಈ ಪ್ರಕರಣದ ನಿಜವಾದ ಸತ್ಯ ಗೊತ್ತಿರುವುದು. ಈಗ ನಾನು ಅವರ ವಿರೋಧವಾಗಿದ್ದೇನೆ. ನಾನು ಕೆಲವು ವಿವಾದಕ್ಕೆ ಸ್ಪಷ್ಟನೆ ನೀಡಲು ಇಷ್ಟಪಡುತ್ತೇನೆ.
Advertisement
Advertisement
1. ಯಾರೂ ಹೇಳಿಕೊಟ್ಟು ನನಗೆ ಈ ರೀತಿ ಮಾಡಿಸುತ್ತಿಲ್ಲ. ಚೇತನ್, ಪ್ರಕಾಶ್ ರೈ ಸರ್, ಕವಿತಾ ಲಂಕೇಶ್ ಮೇಡಂ ಹಾಗೂ ಇನ್ನು ಕೆಲವು ಕಲಾವಿದರು ನನಗೆ ಈ ರೀತಿ ಮಾಡು ಎಂದು ಹೇಳಿಕೊಟ್ಟಿಲ್ಲ. ಅವರು ನನ್ನ ಪರವಾಗಿ ನಿಂತಿದ್ದಾರೆ. ಅದಕ್ಕೆ ನಾನು ಕೃತಜ್ಞತೆಳಾಗಿರುತ್ತೀನಿ.
Advertisement
2. ನಾನು ಅರ್ಜುನ್ ಸರ್ಜಾ ಅವರ ಬಗ್ಗೆ ಏನೂ ಹೇಳಿಕೆ ನೀಡಿದ್ದೇನೆ ಎಂಬುದು ನನಗೆ ತಿಳಿದಿದೆ. ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮ್ಮೆ ಹಾಕಿದ್ದರು ನನಗೆ ಭಯವಿಲ್ಲ. ನಾನು ಧೈರ್ಯದಿಂದ ಕಾನೂನಿನಲ್ಲಿ ಈ ಕೇಸ್ ವಿರುದ್ಧ ಹೋರಾಡುತ್ತೇನೆ.
Advertisement
3. ನಾನು ಇದೂವರೆಗೂ ಯಾರಿಗೂ ಯಾವುದೇ ಸಾಕ್ಷಿಗಳನ್ನು ತೋರಿಸಲಿಲ್ಲ. ನೀವು ನಿಮಗೆ ಯಾರೂ ಸರಿ ಎಂದು ಅನಿಸುತ್ತಾರೋ ಅವರನ್ನು ಬೆಂಬಲಿಸಿ. ಈ ವಿವಾದ ಕೋರ್ಟ್ ಗೆ ಹೋದರೆ ನಾನು ಅಲ್ಲಿ ಎಲ್ಲ ಸಾಕ್ಷಿಗಳನ್ನು ತೋರಿಸುತ್ತೇನೆ. ಆಗ ಕಾನೂನಿನ ಪ್ರಕಾರ ನನಗೆ ನ್ಯಾಯ ಸಿಗುತ್ತದೆ.
4. ನನಗೆ ಫ್ಯಾನ್ಸ್ ಕ್ಲಬ್‍ಗಳಿಂದ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದೆ. ಕೆಲವರು ಮಿಮ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ನನಗೆ ಸತ್ಯ ಏನೂ ಎಂದು ಗೊತ್ತಿದೆ. ನಿಮಗೆ ಏನೂ ಬೇಕು ನೀವು ಅದನ್ನು ಮಾಡಿ. ನಾನು ಏನೂ ಮಾಡಬೇಕು ಅದನ್ನು ಮಾಡುತ್ತೇನೆ. ಅಲ್ಲಿಯವರೆಗೂ ಫನ್ ತೆಗೆದುಕೊಳ್ಳಿ.
5. ಮುನಿರತ್ನ, ಚಿನ್ನೇಗೌಡ, ಸಾ.ರಾ ಗೋವಿಂದು ಹಾಗೂ ಕರ್ನಾಟಕ ಫಿಲ್ಮಂ ಚೇಂಬರ್ ನ ಹಿರಿಯ ವ್ಯಕ್ತಿಗಳು ನೀವು ಕಲಾವಿದರ ಹಕ್ಕುಗಳನ್ನು ಕಾಪಾಡಬೇಕು. ಅಲ್ಲದೇ ಅವರಿಗಾಗಿರುವ ಸಮಸ್ಯೆಯನ್ನು ಲಾಜಿಕಲಿ ಹಾಗೂ ಪ್ರ್ಯಾಕ್ಟಿಕಲಿ ನೀವು ಬಗೆಹರಿಸಬೇಕು. ಕನ್ನಡ ಚಿತ್ರರಂಗವನ್ನು ಸುರಕ್ಷಿತವಾಗಿರಿಸುವುದು ನಿಮ್ಮ ಜವಾಬ್ದಾರಿ. ಸಂಗೀತಾ ಭಟ್, ಸಂಜನಾ, ಸಾಕಷ್ಟು ಮಹಿಳೆಯರು ಆರೋಪ ಮಾಡಿದ್ದಾರೆ. ಆದರೆ ಫಿಲಂ ಚೇಂಬರ್ ಆರೋಪ ಮಾಡಿದವರ ಚಾರಿತ್ರ್ಯ ಹರಣ ಮಾಡುತ್ತಿದೆ.
6. ಯಾರು ಏನೇ ಹೇಳಿದರು ನನಗೆ ಸರಿ ಅನಿಸಿದ್ದನ್ನು ನಾನು ಹೇಳಲು ಹೋರಾಟ ನಡೆಸುತ್ತೇನೆ. ಸತ್ಯವನ್ನು ಎದುರಿಸಲು ನಾನು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಶೃತಿ ಹರಿಹರನ್ ಟ್ವೀಟ್ ಮಾಡಿದ್ದಾರೆ.
A few much needed clarifications. pic.twitter.com/HeuizsKDBV
— sruthihariharan (@sruthihariharan) October 24, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv