ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಮೀಟೂ ಕೇಸ್ ದಾಖಲಿಸಿ ಸ್ಯಾಂಡಲ್‍ವುಡ್ ನಲ್ಲಿ ಸಂಚಲ ಸೃಷ್ಟಿಸಿರುವ ನಟಿ ಶೃತಿ ಹರಿಹರನ್ ಟ್ಟಿಟ್ಟರ್ ನಲ್ಲಿ ಮತ್ತೆ ಗರಂ ಆಗಿದ್ದಾರೆ. ಇಂಗ್ಲಿಷ್ ಪತ್ರಿಕೆಯ ಲೇಖನವನ್ನು ರೀಟ್ವೀಟ್ ಮಾಡಿಕೊಂಡಿರುವ ಶೃತಿ ಹರಿಹರನ್ ಪರೋಕ್ಷವಾಗಿ ಫಿಲ್ಮ್ ಚೇಂಬರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
‘ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಮಾನ್ಯ ಬೆಂಗಳೂರಿಗಳ ಪತ್ರ’ ಶೀರ್ಷಿಕೆಯಲ್ಲಿರುವ ಬೆಂಗಳೂರಿನ ಮಹಿಳೆಯೊಬ್ಬರ ಅಭಿಪ್ರಾಯವನ್ನು ಶೃತಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಈ ಪತ್ರದಲ್ಲಿರುವ ಎಲ್ಲ ಮಾತುಗಳು ಶೃತಿ ಸಮ್ಮತಿ ಸೂಚಿಸಿದ್ದು, ನನ್ನ ಮನದಾಳದ ಮಾತಿದು ಎಂಬರ್ಥದಲ್ಲಿಯೇ ರೀಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪತ್ರದಲ್ಲಿ ಏನಿದೆ?
ಸಿನಿಮಾದ ಸೆಟ್ ನಲ್ಲಿ ನೂರಾರು ಜನರು ಇರುತ್ತಾರೆ. ಆದ್ರೆ ಚಿತ್ರದ ಹೀರೋ ಮತ್ತು ವಿಲನ್ ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಚಿತ್ರದಲ್ಲಿಯ ಹೀರೋ ನಿಜ ಜೀವನದಲ್ಲಿಯೂ ಒಳ್ಳೆಯವನು ಆಗಿರುತ್ತಾನಾ? ಹಾಗಾದ್ರೆ ಜೀವನ ಒಂದು ಸ್ಯಾಂಡಲ್‍ವುಡ್ ಅಥವಾ ಬಾಲಿವುಡ್ ಕಥೆ ಆಗಿ ಹೋಯ್ತಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದೆ.
ನಮ್ಮದು ಎರಡು ಮುಖಗಳಿರುವ ಮಾನವ ಕುಲ. ಪ್ರತಿಯೊಬ್ಬರ ಪ್ರತಿಯೊಂದು ಅನುಭವ ವಿಭಿನ್ನ ಮತ್ತು ವಿಶಿಷ್ಠವಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಾಡುವ ಆರೋಪವನ್ನು ಸುಳ್ಳು ಎಂದು ವಾದಿಸುವುದು ಎಷ್ಟು ಸರಿ? ಹಾಗದರೆ ನೊಂದ ಮಹಿಳೆ ತನ್ನ ನೋವನ್ನು ಹೇಳಿಕೊಳ್ಳುವುದು ತಪ್ಪಾ ಎಂದು ಪ್ರಶ್ನಿಸಲಾಗಿದೆ.
ಈ ಹಿಂದೆ ಕಥುವಾ ರೇಪ್ ಪ್ರಕರಣದಲ್ಲಿ ಟಿವಿ ಮುಂದೆ ಮಹಿಳೆಯರ ಪರ ವಾದಿಸಿದ್ದ ವ್ಯಕ್ತಿಯೇ ಕೇಸ್ ನಲ್ಲಿ ಸಿಲುಕಿಕೊಂಡಿದ್ದನು. ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕರೊಬ್ಬರು ತನ್ನನ್ನು ಗುರು ಎಂದು ನಂಬಿದ್ದ ನಟಿಯ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದನು. ಈ ಮೂಲಕ ಎಲ್ಲ ಪುರುಷರು ಅಥವಾ ಮಹಿಳೆಯರು ಒಳ್ಳೆಯವರಾಗಿರುವುದಿಲ್ಲ.
ಕನ್ನಡ ಚಿತ್ರರಂಗದ ದಿಗ್ಗಜರು ಎಂದು ಕರೆಸಿಕೊಳ್ಳುವ ಜಗ್ಗೇಶ್, ಅಂಬರೀಶ್ ಮತ್ತು ತಾರಾ ಸೇರಿದಂತೆ ಹಲವು ಕಲಾವಿದರು ನೊಂದ ಮಹಿಳೆಯ ನೋವನ್ನು ಕೇಳಬೇಕಿತ್ತು. ಈ ಪ್ರಕರಣದಲ್ಲಿ ನೀವು ನೊಂದ ಮಹಿಳೆಯ ನೋವನ್ನು ಕೇಳುತ್ತೇವೆ ಎಂಬುದನ್ನು ಜಗತ್ತಿಗೆ ತೋರಿಸಿ. ನ್ಯಾಯವೇ ದೇವರು ಎನ್ನುವುದು ಸಿನಿಮಾದಲ್ಲಿ ಮಾತ್ರ ಅಲ್ಲ ನಿಜ ಜೀವನದಲ್ಲಿಯೂ ಇರಬೇಕು ಎಂದು ಫಿಲ್ಮ್ ಚೇಂಬರ್ ಬಗ್ಗೆ ಲೇಖನದಲ್ಲಿ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv