ಮಲಯಾಳಂ (Mollywood) ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲೂ (Sandalwood) ಮಹಿಳೆಯರ ಸುರಕ್ಷತೆಗೆ ಕಮಿಟಿಯಾಗಬೇಕು ಎಂದು ‘ಫೈರ್ ಸಂಸ್ಥೆ’ ಇಂದು (ಸೆ.5) ಸಿಎಂಗೆ ಮನವಿ ಸಲ್ಲಿಸಿದ ಬಳಿಕ ನಟಿ ಶೃತಿ ಹರಿಹರನ್ (Sruthi Hariharan) ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ ಎಂದು ಮಾತನಾಡಿದ್ದಾರೆ.
ಕೇರಳದ ಹೇಮಾ ಕಮಿಟಿ ಹಾಗೇ ನಮ್ಮ ಕನ್ನಡ ಚಿತ್ರರಂಗಕ್ಕೂ ಒಂದು ಕಮಿಟಿ ಬೇಕು. ಮಹಿಳೆಯರು ಸುರಕ್ಷಿತವಾಗಿ ಕೆಲಸ ಮಾಡುವಂತೆ ಆಗಬೇಕು ಎಂದು ಸಿಎಂಗೆ ಮನವಿ ಮಾಡಿರೋದಾಗಿ ಶೃತಿ ಹರಿಹರನ್ ತಿಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು ಮತ್ತೊಮ್ಮೆ ಸದ್ಯದಲ್ಲೇ ಸಭೆ ಮಾಡೋಣ ಎಂದು ಸಿಎಂ ತಿಳಿಸಿದರು ಎಂದು ನಟಿ ಮಾಹಿತಿ ನೀಡಿದ್ದಾರೆ.
- Advertisement
- Advertisement
‘ಫೈರ್ ಸಂಸ್ಥೆ’ ಈ ಹಿಂದೆಯೇ ಶುರುವಾಗಿತ್ತು. ಇಲ್ಲಿ ನ್ಯಾಯದ ಪ್ರಶ್ನೆ ಬರೋದಿಲ್ಲ ಎಂದು ತಾವು ಈ ಹಿಂದೆ ಆರೋಪ ಮಾಡಿದ್ದ ಮೀಟೂ ವಿಚಾರಕ್ಕೆ ಶೃತಿ ಪ್ರತಿಕ್ರಿಯೆ ನೀಡಿದರು. ಬಳಿಕ ಫೈರ್ ನಿಯೋಗದ ಮೂಲಕ ಗಂಡಾಗಲಿ ಅಥವಾ ಮಹಿಳೆಯರಾಗಲಿ ಯಾರೇ ಆಗಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇದು ಒಂದೇ ಅಲ್ಲ, ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ. ಇದರ ಕಡಿವಾಣಕ್ಕೆ ಸರ್ಕಾರದ ಬೆಂಬಲ ಕೂಡ ಇರುತ್ತದೆ ಎಂದಿದ್ದಾರೆ ಶೃತಿ ಹರಿಹರನ್.
ಮಲಯಾಳಂನಲ್ಲಿ ಹೇಮಾ ಕಮಿಟಿ ರಚನೆ ಆದಂತೆ ಕನ್ನಡ ಚಿತ್ರರಂಗದಲ್ಲೂ ಆಗುತ್ತೆ ಎನ್ನುವ ಭರವಸೆಯಿದೆ. ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೆಲ ಸೌಲಭ್ಯಗಳನ್ನು ಕೊಡಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ವಾಶ್‌ರೂಮ್, ವಾಹನದ ವ್ಯವಸ್ಥೆ ಬೇಕಾಗುತ್ತದೆ ಇದು ಕೇವಲ ನಾಯಕಿಯರಿಗೆ ಅಷ್ಟೇ ಅಲ್ಲ. ಜ್ಯೂನಿಯರ್ ಆರ್ಟಿಸ್ಟ್, ಡ್ಯಾನ್ಸರ್‌ಗೆ ಹೀಗೆ ಕೆಲಸ ಮಾಡುವವರಿಗೆ ಸಮಾನತೆ ಇರಬೇಕು ಎಂದು ನಟಿ ಮಾತನಾಡಿದ್ದಾರೆ.
ಸ್ಯಾಂಡಲ್‌ವುಡ್ ನಟರಾದ ಸುದೀಪ್, ರಮ್ಯಾ, ಶ್ರದ್ಧಾ ಶ್ರೀನಾಥ್, ಆಶಿಕಾ ರಂಗನಾಥ್ ಸೇರಿದಂತೆ 140ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಇದಕ್ಕೆ ಬೆಂಬಲ ಸೂಚಿಸಿರುವ ಬಗ್ಗೆ ನಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೀನಿಯರ್ ಕಲಾವಿದರರಾದ ಅವರು ಹೊಸ ಕಮಿಟಿ ಮಾಡಲು ಬೆಂಬಲ ಸೂಚಿಸಿರುವುದಕ್ಕೆ ನಮಗೂ ಒಂದು ಶಕ್ತಿ ಸಿಕ್ಕಂತೆ ಆಗಿದೆ ಎಂದು ಶೃತಿ ಮಾತನಾಡಿದ್ದಾರೆ.