-ಸಂಬರ್ಗಿ ವಿರುದ್ಧ ಚೇತನ್ ಕೂಡ ದೂರು
ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಅವರ ಮೀಟೂ ಬ್ಯಾಟಲ್ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ನಟಿ ಶೃತಿ ಹರಿಹರನ್ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ಮತ್ತೊಂದು ಕೇಸ್ ದಾಖಲಿಸಿದ್ದಾರೆ.
ಪ್ರಶಾಂತ್ ವೈಯಕ್ತಿಕ ಮೆಸೇಜ್‍ಗಳನ್ನು ಸೈಬರ್ ಎಕ್ಸ್ ಪರ್ಟ್‍ಗಳಿಂದ ತೆಗೆಸಿದ್ದಾರೆ. ನನ್ನ ಪರ್ಸನಲ್ ನಂಬರ್ ಕಾಲ್ ಡಿಟೇಲ್ಸ್ ತೆಗೆಯಲು ಇವರ್ಯಾರು?. ಕಾನೂನಿನ ಪ್ರಕಾರವಷ್ಟೇ ಕಾಲ್ ಡಿಟೇಲ್ಸ್ ತೆಗೆಯಲು ಅವಕಾಶವಿದೆ. ಎಥಿಕಲ್ ಹ್ಯಾಕರ್ಸ್ ಮೂಲಕ ನನ್ನ ಮಾಹಿತಿ ಕಲೆ ಹಾಕಿದ್ದಾರೆ. ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲಸಲ್ಲದ ಪೋಸ್ಟ್ ಮಾಡಿದ್ದಾರೆ. ನನ್ನ ವಿರುದ್ಧ ಅವಹೇಳನಕಾರಿ ಪೋಸ್ಟ್‍ಗಳನ್ನು ಮಾಡಿ ಟ್ರೋಲ್ ಮಾಡಲಾಗ್ತಿದೆ. ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿಲಾಗ್ತಿದೆ. ಕೂಡಲೇ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂದು ನಟಿ ಶೃತಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ನಟ ಹಾಗೂ ಫೈರ್ ಸಂಸ್ಥೆ ಮುಖ್ಯಸ್ಥ ಚೇತನ್ ಅವರು ಕೂಡ ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ್ದಾರೆ. ಚೇತನ್ ಅವರು ಪ್ರಶಾಂತ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ನಾನು ಹುಟ್ಟು ಹಾಕಿದ ಫೈರ್ ಸಂಸ್ಥೆ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಫೇಸ್‍ಬುಕ್ ಮೂಲಕ ಅನಾಮಧೇಯ ಕರೆ ಮಾಡಿದ್ದಾರೆ. ಅನಾಮಧೇಯ ಕರೆಯನ್ನು ಪ್ರಶಾಂತ್ ಸಂಬರ್ಗಿ ಸಾಬೀತು ಪಡಿಸಲಿ, ಇಲ್ಲದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ನಟ ಚೇತನ್ ದೂರು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv