ತೆಲುಗು ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಮೂಡಿಸಿರುವ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ಇದೀಗ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಮೈಸೂರು ಹೋಟೆಲ್ ನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಿಕ್ಕಾಕಿಕೊಂಡ ನಂತರ ಅವರು ಹೈದರಾಬಾದ್ ಗೆ ಹೋಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ನರೇಶ್ ಪತ್ನಿ ರಮ್ಯಾ ಕೂಡ ಹೈದರಾಬಾದ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಪತ್ರಿಕಾಗೋಷ್ಠಿ ಮಾಡಲಿದ್ದಾರಂತೆ.
Advertisement
ಈ ಹೈಡ್ರಾಮಾದ ನಡುವೆಯೇ ವಿವಾದಿತ ತಾರೆ, ತೆಲುಗು ನಟಿ ಶ್ರೀರೆಡ್ಡಿ ಎಂಟ್ರಿ ಪಡೆದಿದ್ದಾರೆ. ಈ ಹಿಂದೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರೆಡ್ಡಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು ಈ ಸಂದರ್ಭವನ್ನು ನೆನಪಿಸಿಕೊಂಡು ಲೈವ್ ಮಾಡಿರುವ ಶ್ರೀರೆಡ್ಡಿ ಮತ್ತೆ ನರೇಶ್ ಹಾಗೂ ಪವಿತ್ರಾ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ನಾನು ಮೀಟೂ ವಿರುದ್ಧ ಪ್ರತಿಭಟನೆ ನಡೆಸಿದಾಗ ನರೇಶ್, ಆ್ಯಸಿಡ್‌ನಿಂದ ಕೈ ತೊಳಯಬೇಕು ಎಂದು ಕಾಮೆಂಟ್ ಮಾಡಿದ್ದರು. ಈಗ ಅವರ ಸ್ಥಿತಿ ಏನಾಗಿದೆ ನೋಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ
Advertisement
Advertisement
ಯಾರ ಬದುಕಿನಲ್ಲೂ ಯಾರು ಬಿರುಗಾಳಿ ಎಬ್ಬಿಸಬಾರದು ಎಂದು ಪರೋಕ್ಷವಾಗಿ ಪವಿತ್ರಾ ಲೋಕೇಶ್ ಕುರಿತಾಗಿಯೂ ಮಾತನಾಡಿರುವ ಶ್ರೀರೆಡ್ಡಿ, ರಮ್ಯಾ ಅವರ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ, ಮಹಿಳೆ ಅಂದಾಕ್ಷಣ ಅವರ ಶೀಲವನ್ನು ಶಂಕಿಸಲಾಗುತ್ತದೆ. ರಮ್ಯಾ ಮೇಲೂ ಅದೇ ಆಗಿದೆ. ಆದರೆ, ನಿಜವಾಗಿಯೂ ಜನರ ಮುಂದೆ ಬೆತ್ತಲೆ ಆದವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನರೇಶ್ ಅವರನ್ನು ಕೇಳಿದ್ದಾರೆ.
Advertisement
ಶ್ರೀರೆಡ್ಡಿ ಲೈವ್ ಗೆ ಬಂದು ಮತ್ತೆ ಹಲವು ಕಲಾವಿದರ ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ. ಅವರು ಜೀವನವೂ ಇದೇ ಹಾದಿಯಲ್ಲಿದೆ. ಮುಂದೆ ಜನರಿಗೂ ಗೊತ್ತಾಗಲಿದೆ ಎಂದು ಅಬ್ಬರಿಸಿದ್ದಾರೆ. ಶ್ರೀರೆಡ್ಡಿ ಲೈವ್ ಗೆ ಬರುತ್ತಿದ್ದಂತೆಯೇ ಮೀಟೂ ಚಳವಳಿ ಮತ್ತೆ ಆರಂಭವಾಗಲಿದೆಯಾ ಅನ್ನುವ ಅನುಮಾನವನ್ನಂತೂ ಅವರು ಹುಟ್ಟು ಹಾಕಿದ್ದಾರೆ.