ಮದುವೆಗೂ ಮುನ್ನ ನಟಿ ಶ್ರೀದೇವಿ ಪ್ರಗ್ನೆಂಟ್: ಮೌನ ಮುರಿದ ಪತಿ ಬೋನಿ ಕಪೂರ್

Public TV
2 Min Read
sridevi 1

ಬಾಲಿವುಡ್ ನ  ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ನಿಧನರಾಗಿ ನಾಲ್ಕು ವರ್ಷಗಳ ನಂತರ ಪತ್ನಿಯ ಬಗ್ಗೆ ಹಲವಾರು ವಿಚಾರಗಳನ್ನು ಮಾತನಾಡುತ್ತಿದ್ದಾರೆ ಬೋನಿ ಕಪೂರ್. ಶ್ರೀದೇವಿ ಅವರ ನಿಗೂಢ ನಿಧನದ ನಂತರ ಸಾರ್ವಜನಿಕವಾಗಿ ಅಷ್ಟೇನೂ ಕಾಣಿಸಿಕೊಳ್ಳದ ಬೋನಿ ಕಪೂರ್ ವಾಹಿನಿಯೊಂದರ ಜೊತೆ ಮಾತನಾಡುತ್ತಾ, ಪತ್ನಿಯ ಹಲವಾರು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

sridevi 3

ತೊಂಬತ್ತರ ದಶಕದಲ್ಲಿ ಶ್ರೀದೇವಿ ಯಾವ ಸ್ಟಾರ್ ನಟರಿಗೂ ಕಡಿಮೆ ಇರಲಿಲ್ಲ. ಸೌಂದರ್ಯಕ್ಕೆ ಮತ್ತೊಂದು ಪದವೇ ಅವರಾಗಿದ್ದರು. ಈ ಸಮಯದಲ್ಲಿ ಬೋನಿ ಕಪೂರ್ ಅವರನ್ನು ಮದುವೆ ಆಗಿ ಎಲ್ಲರಿಗೂ ಶಾಕ್ ನೀಡಿದ್ದರು. ಬೋನಿ ಕಪೂರ್ ಅವರಿಗೆ ಅದು ಎರಡನೇ ಮದುವೆ ಆಗಿತ್ತು. 1996 ಜೂನ್ 2ರಂದು ಶಿರಡಿಯಲ್ಲಿ ಮದುವೆ ಆಗುವುದರ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರ ಶ್ರೀದೇವಿ. ಕೆಲ ತಿಂಗಳ ಬಳಿಕ ಶ್ರೀದೇವಿ ಗರ್ಭಿಣಿ (Pregnant) ಆಗಿರುವ ವಿಚಾರವನ್ನು ಕಪೂರ್ ಕುಟುಂಬ ಬಹಿರಂಗಪಡಿಸಿತ್ತು.

sridevi 2

ಮದುವೆಗೂ ಮುನ್ನ ಶ್ರೀದೇವಿ ಪ್ರಗ್ನೆಂಟ್ ಆಗಿದ್ದರು. ಆ ಕಾರಣಕ್ಕಾಗಿ ಬೇಗ ಬೇಗ ಮದುವೆಯಾದರು ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ಮದುವೆಗೂ ಮುನ್ನ ಜಾನ್ವಿ ಕಪೂರ್ ಹುಟ್ಟಿದ್ದು ಅಂತ ಈಗಲೂ ಬಿಟೌನ್ ಮಾತನಾಡಿಕೊಳ್ಳುತ್ತಿದೆ. ಇದಕ್ಕೆ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ ಬೋನಿ ಕಪೂರ್.

Janvi Kapoor Bonnie Kapoor

ಮದುವೆಗೂ ಮುನ್ನ ಶ್ರೀದೇವಿ ಗರ್ಭಿಣಿ ಆಗಿದ್ದರು ಎನ್ನುವುದು ಸುಳ್ಳು. 1996 ಜೂನ್ ನಲ್ಲಿ ನಮ್ಮಿಬ್ಬರ ಮದುವೆ ಆಯಿತು. ಶ್ರೀದೇವಿ ಪ್ರಗ್ನೆಂಟ್ ಆಗಿದ್ದು 1997 ಜನವರಿಯಲ್ಲಿ. ಶ್ರೀದೇವಿ ಅವರ ಬಗ್ಗೆ ಸುಖಾಸುಮ್ಮನೆ ಅಪಪ್ರಚಾರ ಮಾಡಿದರು. ಅದೆಲ್ಲವೂ ಸುಳ್ಳು. ಮದುವೆ ನಂತರವೇ ಜಾನ್ವಿ ಹುಟ್ಟಿದ್ದು ಎಂದು ಹೇಳಿದ್ದಾರೆ ಬೋನಿ ಕಪೂರ್.

Khushi Kapoor Janvi Kapoor

ಶ್ರೀದೇವಿ ಸತ್ತದ್ದು ಹೇಗೆ?

ಬರೋಬ್ಬರಿ ಐದು ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ (Sridevi) ಅವರ ಸಾವಿನ ರಹಸ್ಯ ಬಯಲಾಗಿದೆ. ಭಾರತೀಯ ಸಿನಿಮಾ ರಂಗ ಕಂಡ ಲೇಡಿ ಸೂಪರ್ ಸ್ಟಾರ್ ದುಬೈನಲ್ಲಿ (Dubai) 2018ರಂದು ಹಠಾತ್‍ ಸಾವನ್ನಪ್ಪಿದ್ದರು. ತಾವು ಉಳಿದುಕೊಂಡಿದ್ದ ಹೋಟೆಲ್ ನ ಬಾತ್ ಟಬ್‍ ನಲ್ಲಿ ಶ್ರೀದೇವಿ ಅವರ ಮೃತದೇಹ ಪತ್ತೆಯಾಗಿತ್ತು.

sridevi 1

ಆರೋಗ್ಯವಾಗಿದ್ದ ಶ್ರೀದೇವಿ ಹಠಾತ್ ನಿಧನರಾದ ಸುದ್ದಿಯನ್ನು ಸಹಜ ಸಾವು ಎಂದು ಯಾರೂ ನಂಬಲು ತಯಾರಿರಲಿಲ್ಲ. ಹಾಗಾಗಿ ಆ ಸಾವಿಗೆ ರೆಕ್ಕಪುಕ್ಕಗಳು ಹುಟ್ಟುಕೊಂಡವು. ಅತಿಯಾದ ಮದ್ಯ ಸೇವನೆಯಿಂದ ಶ್ರೀದೇವಿ ನಿಧನರಾಗಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದರೆ, ಇನ್ನೂ ಕೆಲವರು ಬಾತ್ ಟಬ್‍ ನಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದೂ ಮಾತನಾಡಿಕೊಂಡರು. ಹಾಗಾಗಿ ಅವರ ಸಾವು ನಿಗೂಢವಾಗಿ ಉಳಿದಿತ್ತು.

sridevi

ಇದೇ ಮೊದಲ ಬಾರಿಗೆ ಪತ್ನಿಯ ಸಾವಿನ ಬಗ್ಗೆ ಬೋನಿ ಕಪೂರ್ (Boney Kapoor)  ಮಾತನಾಡಿದ್ದಾರೆ. ಶ್ರೀದೇವಿ ಅವರ ಸಾವಿಗೆ ವಿಪರೀತವಾಗಿ ಅವರು ಪಥ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಸದಾ ತಾನು ಸುಂದರವಾಗಿಯೇ ಇರಬೇಕು ಎಂದು ಶ್ರೀದೇವಿ ಪಥ್ಯ ಮಾಡುತ್ತಿದ್ದರು. ಹಲವಾರು ಬಾರಿ ಉಪವಾಸ ಇರುತ್ತದೆ. ಕಡಿಮೆ ರಕ್ತದೊತ್ತಡವಿದೆ ಎಂದು ವೈದ್ಯರು ತಿಳಿಸಿದ್ದರು ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.

 

ಶ್ರೀದೇವಿ ಅವರ ನಿಧನರಾದಾಗ ತಮ್ಮನ್ನು ದುಬೈ ಪೊಲೀಸರು ಹಲವು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದರು ಎನ್ನುವ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಸುಳ್ಳು ಪತ್ತೆ ಸೇರಿದಂತೆ ಹಲವಾರು ರೀತಿಯ ತನಿಖೆಗಳನ್ನೂ ಪೊಲೀಸರು ಮಾಡಿದ್ದಾರೆ ಎನ್ನವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಬೋನಿ ಕಪೂರ್.

Web Stories

Share This Article