ರಶ್ಮಿಕಾ ಕೈಬಿಟ್ಟ ಚಿತ್ರಕ್ಕೆ ನಾಯಕಿಯಾದ ಶ್ರೀಲೀಲಾ

Public TV
1 Min Read
sreeleela 1 3

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಬೇಕಿದ್ದ ಚಿತ್ರಕ್ಕೆ ಕನ್ನಡದ ‘ಕಿಸ್’ ನಟಿ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಕೈಬಿಟ್ಟ ಚಿತ್ರಕ್ಕೆ ಶ್ರೀಲೀಲಾ (Sreeleela) ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ರಾಯಲ್ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

sreeleela 1

ಶ್ರೀಲೀಲಾ ಹುಟ್ಟುಹಬ್ಬದ (ಜೂನ್.14) ಸಂಭ್ರಮದಲ್ಲಿದ್ದಾರೆ. ನಟಿಯ ಜನ್ಮದಿನದಂದೇ ‘ರಾಬಿನ್ ಹುಡ್’ ಚಿತ್ರಕ್ಕೆ ಕಿಸ್ ನಟಿ ಹೀರೋಯಿನ್ ಎಂದು ಸ್ಪೆಷಲ್ ಟೀಸರ್ ರಿಲೀಸ್ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ:ಮಾಲಿವುಡ್ ಸ್ಟಾರ್ ಮಮ್ಮುಟ್ಟಿ ಸಿನಿಮಾದಲ್ಲಿ ಸಮಂತಾ

ಕೆಂಪು ಬಣ್ಣದ ಉಡುಗೆಯಲ್ಲಿ ಸ್ಟೈಲೀಶ್ ಆಗಿ ವಿಮಾನದಿಂದ ನಟಿ ಇಳಿದು ಬರುತ್ತಿರುವ ಟೀಸರ್ ರಿವೀಲ್ ಮಾಡಿ ನಟಿಗೆ ಚಿತ್ರತಂಡ ಶುಭಕೋರಿದೆ. ಇನ್ನೂ ‘ರಾಬಿನ್ ಹುಡ್’ ಚಿತ್ರದ ಮೂಲಕ ನಿತಿನ್‌ಗೆ 2ನೇ ಬಾರಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.

SREELEELA 1 3

ಈ ಹಿಂದೆ ರಶ್ಮಿಕಾ ಮಂದಣ್ಣ ನಾಯಕಿ ಎಂದು ಘೋಷಿಸಿದ್ದರು. ಆದರೆ ಡೇಟ್ಸ್ ಹೊಂದಾಣಿಕೆಯಿಂದ ನಟಿ ಸಿನಿಮಾದಿಂದ ಹೊರಬಂದಿದ್ದರು. ಈಗ ಅದೇ ಚಿತ್ರಕ್ಕೆ ಕನ್ನಡದ ‘ಕಿಸ್’ ನಟಿ ಆಯ್ಕೆಯಾಗಿದ್ದಾರೆ.‌ ಇದನ್ನೂ ಓದಿ:ಝಹೀರ್ ಜೊತೆಗಿನ ಮದುವೆ ನನ್ನ ಆಯ್ಕೆ- ಟ್ರೋಲಿಗರ ಬಾಯಿ ಮುಚ್ಚಿಸಿದ ಸೋನಾಕ್ಷಿ

sreeleela 1 2ಆ್ಯಕ್ಷನ್ ಕಮ್ ಕಾಮಿಡಿಯಾಗಿರುವ ಈ ಸಿನಿಮಾವನ್ನು ವೆಂಕಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ಡಿಸೆಂಬರ್ 20ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ಅಂದಹಾಗೆ, ಸೈಫ್ ಅಲಿ ಖಾನ್ ಪುತ್ರನ ಬಾಲಿವುಡ್ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ರವಿತೇಜ ಹೊಸ ಚಿತ್ರಕ್ಕೆ ನಟಿ ಫೈನಲ್ ಆಗಿದ್ದಾರೆ. ಇತ್ತೀಚೆಗೆ ಮುಹೂರ್ತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿದೆ.

Share This Article