ಕನ್ನಡತಿ ಶ್ರೀಲೀಲಾಗೆ (Sreeleela) ಟಾಲಿವುಡ್ ಬಳಿಕ ಬಾಲಿವುಡ್‌ನಲ್ಲೂ ಬಿಗ್ ಚಾನ್ಸ್ ಸಿಕ್ಕಿದೆ. ಈ ಬೆನ್ನಲ್ಲೇ ಶ್ರೀಲೀಲಾ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಿರುಪತಿಗೆ (Tirupati Temple) ನಟಿ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ವರುಣ್ ಧವನ್ (Varun Dhawan) ಹೊಸ ಸಿನಿಮಾಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನಿಂದ ಉತ್ತಮ ಅವಕಾಶಗಳು ನಟಿಗೆ ಅರಸಿ ಬರುತ್ತಿವೆ. ಹಾಗಾಗಿ ಅಮ್ಮ ಸ್ವರ್ಣ ಲತಾ ಜೊತೆ ಶ್ರೀಲೀಲಾ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಮಿಡಲ್ ಕ್ಲಾಸ್ ಮನೆಯ ‘ಮರ್ಯಾದೆ ಪ್ರಶ್ನೆ’ ಎಂದ ರಾಕೇಶ್ ಅಡಿಗ, ಶೈನ್ ಶೆಟ್ಟಿ
ಅಂದಹಾಗೆ, ಶ್ರೀಲೀಲಾ ನಟಿಸಲಿರುವ ಬಾಲಿವುಡ್ (Bollywood) ಚಿತ್ರ ಪಕ್ಕಾ ಕಾಮಿಡಿ ಡ್ರಾಮಾ ಸಿನಿಮಾ ಆಗಿದ್ದು, ವರುಣ್ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡಲಿದ್ದಾರೆ. ಜುಲೈ ಕೊನೆಯಲ್ಲಿ ಶೂಟಿಂಗ್ ಶುರುವಾಗಲಿದ್ದು, ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಇನ್ನೂ ನಿತಿನ್ ಜೊತೆ ‘ರಾಬಿನ್‌ಹುಡ್’ ಸಿನಿಮಾ ಮಾಡುತ್ತಿರೋದು ಅಧಿಕೃತ ಘೋಷಣೆ ಆಗಿದೆ. ರವಿತೇಜ ಜೊತೆ ಸಿನಿಮಾಗೆ ಚಾಲನೆ ಸಿಕ್ಕಿದೆ. ಪವನ್ ಕಲ್ಯಾಣ್ ಜೊತೆಗಿನ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಕನ್ನಡದ ಜ್ಯೂನಿಯರ್ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ತಿದೆ ಚಿತ್ರತಂಡ.
ಅದಷ್ಟೇ ಅಲ್ಲ, ತಮಿಳಿನ ಅಜಿತ್ ಕುಮಾರ್ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೂ ಶ್ರೀಲೀಲಾ ನಾಯಕಿ ಎನ್ನಲಾಗಿದೆ. ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಸಿನಿಮಾಗೂ ಇವರೇ ಹೀರೋಯಿನ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ನಲ್ಲಿ ಶ್ರೀಲೀಲಾಗೆ ಚಿತ್ರರಂಗದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿರೋದು ಗ್ಯಾರಂಟಿ.