`ಕಿಸ್’ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ನಾಯಕಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ (Sreeleela) ಇದೀಗ ಕನ್ನಡದಲ್ಲಿ ಮರೀಚಿಕೆಯಾಗಿದ್ದಾರೆ. ಒಂದೇ ಒಂದು ಕನ್ನಡ ಚಿತ್ರವನ್ನ ಶ್ರೀಲೀಲಾ ಒಪ್ಪಿಕೊಳ್ತಿಲ್ಲ ಎಂಬ ಮಾತುಗಳು ಗಾಂಧಿನಗರದ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ. ಕುಟುಂಬ ಸಮೇತ ಹೈದ್ರಾಬಾದ್‌ಗೆ (Hyderabad) ಶಿಫ್ಟ್ ಆಗಿರುವ ಶ್ರೀಲೀಲಾ ಕನ್ನಡ ಸಿನಿಮಾ ಮಾಡುವುದು ಬಹುತೇಕ ವಿರಳ ಎನ್ನಲಾಗುತ್ತಿದೆ.
ಸದ್ಯಕ್ಕೆ ಶ್ರೀಲೀಲಾ `ಆಶಿಕಿ 3′ ಚಿತ್ರದಲ್ಲಿ ನಟಿಸಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಜೊತೆಗೆ ಪವನ್ ಕಲ್ಯಾಣ್ ಜೊತೆಗಿನ ಉಸ್ತಾದ್ ಭಗತ್‌ಸಿಂಗ್ ಹಾಗೂ ರವಿತೇಜ ಜೊತೆ ನಟಿಸಿರುವ ಮಾಸ್ ಜಾತ್ರಾ ಸಿನಿಮಾವೂ ರಿಲೀಸ್‌ಗೆ ಸಿದ್ಧವಿದೆ. ಇದರ ಹೊರತಾಗಿ ಶ್ರೀಲೀಲಾ ಬೇರೆ ಪ್ರಾಜೆಕ್ಟ್‌ಗಳು ಅನೌನ್ಸ್ ಆಗಿಲ್ಲ. ಆದರೂ ಶ್ರೀಲೀಲಾ ಕನ್ನಡ ಚಿತ್ರಗಳನ್ನ ಒಪ್ಪಿಕೊಳ್ಳುತ್ತಿಲ್ಲವಂತೆ.ಇದನ್ನೂ ಓದಿ:ನಟ ದರ್ಶನ್ ಪುತ್ರ ವಿನೀಶ್‌ಗೆ ಬರ್ತ್‌ಡೇ ಸಂಭ್ರಮ; ವಿಜಯಲಕ್ಷ್ಮಿ ಪೋಸ್ಟ್
ಬಹುಭಾಷೆಯಲ್ಲಿ ತಯಾರಾಗ್ತಿರೋ ಚಿತ್ರಗಳ ಹೊರತಾಗಿ ಶ್ರೀಲೀಲಾ ಕನ್ನಡದಲ್ಲಿ ತಯಾರಾಗುವ ಮಿನಿಮಮ್ ಬಜೆಟ್, ಬಿ ಗ್ರೇಡ್ ಹೀರೋಗಳ ಜೊತೆ ನಟಿಸೋಕೆ ಒಲ್ಲೆ ಎನ್ನುತ್ತಿದ್ದಾರಂತೆ. ಚಿತ್ರವೊಂದಕ್ಕೆ ಕೋಟಿ ಮೀರಿ ಸಂಭಾವನೆ ಪಡೆಯುತ್ತಿರುವ ಶ್ರೀಲೀಲಾರನ್ನು ಅಫರ್ಡ್ ಮಾಡುವುದು ಚಿಕ್ಕಪುಟ್ಟ ನಿರ್ಮಾಪಕರಿಗೆ ಕಷ್ಟಸಾಧ್ಯವಂತೆ. ಹೀಗಾಗಿ ಶ್ರೀಲೀಲಾರನ್ನು ಇನ್ಮುಂದೆ ರಶ್ಮಿಕಾ ಹಾದಿಯಲ್ಲೇ ನೋಡಬಹುದಾದ ಸ್ಥಿತಿ ಎದುರಾಗಲಿದೆ.
 


 
		 
		 
		 
		 
		
 
		 
		 
		 
		