ಕನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಏಕಾಏಕಿ ಶ್ರೀಲಂಕಾಕ್ಕೆ ಹೋಗಿದ್ದಾರೆ. ಭರ್ತಿ ಎರಡು ದಿನ ಅಲ್ಲಿ ಕಳೆಯಲಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ. ಒಂದೊಂದು ಗಂಟೆ ಟೈಮ್‌ಗೂ ಒದ್ದಾಡುತ್ತಿದ್ದಾರೆ ಶ್ರೀಲೀಲಾ. ಶೂಟಿಂಗ್, ಮೆಡಿಕಲ್ ಪರೀಕ್ಷೆ, ಪ್ರಚಾರಕ್ಕೆಲ್ಲಾ ಸಮಯ ಕೊಡಲಾರದ ಹುಡುಗಿ ಶ್ರೀಲಂಕಾಕ್ಕೆ ಹೋಗಿದ್ಯಾಕೆ? ಇಲ್ಲಿದೆ ಮಾಹಿತಿ.

‘ಬಾಹುಬಲಿ’ (Bahubali) ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ಮದುವೆ ಇಂದು (ಡಿ.6) ನಡೆಯುತ್ತಿದೆ. ಹುಡುಗಿ ಪ್ರತ್ಯೂಶಾ. ಈಕೆಗಾಗಿ ಶ್ರೀಲೀಲಾ ಶ್ರೀಲಂಕಾಕ್ಕೆ ಹೋಗಿದ್ದಾರೆ. ಬಾಲ್ಯದ ಗೆಳತಿ ಪ್ರತ್ಯೂಶಾ- ಶ್ರೀಲೀಲಾ ಅಮೆರಿಕಾದಲ್ಲಿ ಇಬ್ಬರೂ ಒಂದೇ ಕಾಲೇಜಿನ ಗೆಳತಿಯರು. ಹೀಗಾಗಿ ಇದ್ದ ಬದ್ದ ಕೆಲಸವೆಲ್ಲಾ ಪಕ್ಕಕ್ಕಿಟ್ಟು ಶ್ರೀಲೀಲಾ ಮದುವೆಗೆ ಹಾಜರಾಗಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್ ಮತ್ತು ಸಿನಿಮಾ ರಿಲೀಸ್‌ನಲ್ಲಿ ಬ್ಯುಸಿಯಿದ್ದ ‘ಕಿಸ್’ ನಟಿ. ಕೊಂಚ ತೆಗೆದುಕೊಂಡು ಶ್ರೀಲಂಕಾಗೆ ಹಾರಿದ್ದಾರೆ. ಅಂದಹಾಗೆ, ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಶ್ರೀಲೀಲಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.


