– 16 ವರ್ಷದ ಸಿನಿಮಾ ಜೀವನದಲ್ಲಿ 102 ಚಿತ್ರದಲ್ಲಿ ನಟನೆ
ಕೋಲಾರ: ಪಂಚಭಾಷಾ ತಾರೆ ಕನ್ನಡದ ಕುವರಿ ದಿವಂಗತ ನಟಿ ಸೌಂದರ್ಯ ಅವರು ಅಗಲಿ ಇಂದಿಗೆ 15 ವರ್ಷಗಳು ಕಳೆದಿದೆ. ಆದರೂ ಅವರು ಅಭಿನಯಿಸಿರುವ ಸಿನಿಮಾಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ಚಿರಪರಿಚಿತರಾಗಿದ್ದಾರೆ.
ಸೌಂದರ್ಯ ಅವರು ಜುಲೈ 18, 1976 ರಲ್ಲಿ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಸತ್ಯನಾರಾಯಣ ಹಾಗೂ ಮಂಜುಳಾ ಮಗಳಾಗಿ ಜನಿಸಿದ್ದರು. ಸೌಂದರ್ಯ ಅವರ ಮೊದಲ ಹೆಸರು ಸೌಮ್ಯ. ಒಂದನೇ ತರಗತಿಯನ್ನು ಗಂಜಿಗುಂಟೆ ಗ್ರಾಮದಲ್ಲೇ ಓದಿದ ಸೌಂದರ್ಯ ನಂತರ ಬೆಂಗಳೂರಿಗೆ ಬಂದಿದ್ದರು.
Advertisement
Advertisement
ಚಿಕ್ಕಂದಿನಿಂದಲೇ ಸಂಗೀತ, ನಾಟ್ಯ, ನಾಟಕದ ಬಗ್ಗೆ ಆಸಕ್ತಿ ಹೊಂದಿದ್ದ ಸೌಂದರ್ಯ ಅವರಿಗೆ ಸತ್ಯ ಪ್ರೊಡಕ್ಷನ್‍ನಲ್ಲಿ ಹೊರಬಂದ ನನ್ನ ತಂಗಿಯ ಸಿನಿಮಾದಲ್ಲಿ ನಟನೆ ಕಂಡು ಚಿತ್ರರಂಗ ಅದ್ಧೂರಿ ಅವಕಾಶದ ಸ್ವಾಗತವನ್ನೇ ನೀಡಿತ್ತು. 16 ವರ್ಷಗಳ ಸಿನಿಮಾ ಜೀವನದಲ್ಲಿ ಒಟ್ಟು 107 ಸಿನಿಮಾಗಲ್ಲಿ ನಟಿಸಿದ್ದ ಸೌದರ್ಯ, ದೇಶದ ನಂಬರ್ 1 ಸ್ಟಾರ್ ಅಮಿತಾಭ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್, ಚಿರಂಜೀವಿ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆಗೂ ಅಭಿನಯಿಸಿ ಮಿಂಚಿದ್ದರು. ಆದರೆ ಸೌಂದರ್ಯ ಇಷ್ಟು ಬೇಗನೇ ನಮ್ಮನ್ನು ಅಗಲಿ ದೂರಹೋಗುತ್ತಾರೆ ಅಂದುಕೊಂಡಿರಲಿಲ್ಲ.
Advertisement
Advertisement
ಸಹೋದರ ರವಿ ಅವರು ತಂಗಿಯ ಬಗ್ಗೆ ಮಾತನಾಡಿ, “ಬಡತನದಿಂದಲೇ ಮೇಲೆ ಬಂದ ಸೌಂದರ್ಯ ತಾನು ಎಷ್ಟು ಎತ್ತರಕ್ಕೆ ಹೋದರೂ ಕೂಡಾ ಎಂದು ಅಹಂಕಾರ, ಗರ್ವದಿಂದ ಜನರ ಜೊತೆಯಾಗಲಿ ತನ್ನ ಅಭಿಮಾನಿಗಳ ಜೊತೆಯಾಗಲಿ ನಡೆದುಕೊಂಡಿರಲಿಲ್ಲ. ಇಂತಹ ಸೌಮ್ಯ ಸ್ವಭಾವದ ಸೌಂದರ್ಯ ತನ್ನ ಹುಟ್ಟೂರಿಗೆ ಬಂದಾಗಲೂ ತನ್ನ ಎಲ್ಲಾ ಸಂಬಂಧಿಕರ ಮನೆಗೆ ಹೋಗಿ ಅವರೊಡನೆ ಬೆರೆತು ಆಡುತ್ತಿದ್ದಳು. ಜೊತೆಗೆ ತನ್ನ ಸಂಬಂಧಿಕರ ಕಷ್ಟ ಸುಖಗಳನ್ನು ವಿಚಾರಿಸಿ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದಳು. ಇಂದಿಗೂ ಆಕೆಯಿಂದ ಸಹಾಯ ಪಡೆದವರು ಸೌಂದರ್ಯಳನ್ನು ನೆನೆದು ಕಣ್ಣೀರಿಡುತ್ತಾರೆ” ಎಂದು ಹೇಳುತ್ತಾರೆ.
2004ರ ಏಪ್ರಿಲ್ 17 ರಂದು ತನ್ನ ಅಣ್ಣನೊಂದಿಗೆ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರಕ್ಕೆ ಹೋಗುವಾಗ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ವಿಮಾನ ಅಪಘಾತವಾಗಿ ಸೌಂದರ್ಯ ಹಾಗೂ ಆಕೆಯ ಅಣ್ಣ ಅಮರನಾಥ್ ಜೀವಂತವಾಗಿ ಸುಟ್ಟುಕರಕಲಾಗಿದ್ದರು. ಅಂದಿಗೆ ಭೂಮಿಯ ಮೇಲಿದ್ದ ಸೌಂದರ್ಯ ರಾಶಿಯೇ ಮುದುಡಿ ಹೋಗಿತ್ತು. ಆಕೆ ಎಷ್ಟೆತ್ತರಕ್ಕೆ ಹೋದರೂ ಆಕೆಯ ಸರಳತೆ ಎಲ್ಲರ ಮನಸ್ಸಿನಲ್ಲಿ ಮನೆಮಾಡಿತ್ತು. ಸೌಂದರ್ಯ ತಾನು ಉನ್ನತ ಸ್ಥಾನಕ್ಕೇರಿದ ಮೇಲೆ ತನ್ನೂರಿಗೆ ಒಂದು ಶಾಲೆ ಕಟ್ಟಡವನ್ನು ನಿರ್ಮಾಣ ಮಾಡಿ ಕೊಟ್ಟಿದ್ದರು. ಇಂದಿಗೂ ಆ ಕಟ್ಟಡದ ಮೇಲೆ ಅವರ ಹೆಸರನ್ನು ಬರೆಯಲಾಗಿದೆ. ಅಷ್ಟೆ ಅಲ್ಲದೇ ತನ್ನೂರಿನಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಬೇಕು ಎಂಬ ಹತ್ತು ಹಲವು ಆಸೆಗಳನ್ನು ಹೊತ್ತಿದ್ದ ಸೌಂದರ್ಯಳ ನೆನಪು, ಸದ್ಯ ನೆನಪಾಗಿ ಉಳಿದಿದೆ ಎಂದು ಸೌಂದರ್ಯ ಅಣ್ಣ ರವಿಕುಮಾರ್ ತಿಳಿಸಿದ್ದಾರೆ.