ಮಡಿಕೇರಿ: ಕುಟುಂಬಸ್ಥರ ಆಕ್ರಂದನದ ಮಧ್ಯೆ ನಟಿ ಸೌಜನ್ಯ ಅವರ ಅಂತ್ಯಕ್ರಿಯೆ ಕೊಡಗಿನ ಸುಂಟಿಕೊಪ್ಪದ ಅಂದಗೋವೆಯಲ್ಲಿ ನಡೆದಿದೆ. ಸೌಜನ್ಯ ನೇಣು ಹಾಕಿಕೊಂಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಪೊಲೀಸರಿಗೆ ಮೌಖಿಕ ಮಾಹಿತಿ ಸಿಕ್ಕಿದೆ.
Advertisement
ಮೃತ ದೇಹ ಸ್ವಗ್ರಾಮಕ್ಕೆ ಅಗಮಿಸುತ್ತಿರುವ ವೇಳೆಗೆ ಗ್ರಾಮಸ್ಥರ ಹಾಗೂ ಕುಟುಂಬ ಸದಸ್ಯರ ರೋದನೆ ಮುಗ್ಗಿಲು ಮುಟ್ಟಿತು. ನಟಿ ಸೌಜನ್ಯ ಮೃತ ದೇಹವನ್ನು ಚಿಕ್ಕಂಡ ಕುಟುಂಬದ ಐನ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತಳಾಗಿದ್ದ ಕಾರಣ ಕೊಡವ ಸಾಂಪ್ರದಾಯದಂತೆ ಬಾಳೆ ವಿವಾಹ ಮಾಡಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ: ನಾನು, ಸೌಜನ್ಯ ಲಿವಿಂಗ್ ಟುಗೆದರ್‌ನಲ್ಲಿ ಇರಲಿಲ್ಲ: ವಿವೇಕ್
Advertisement
Advertisement
ಈ ನಡುವೆ ನಟಿ ಸೌಜನ್ಯ ಮಾದಪ್ಪ ಗ್ರಾಮಕ್ಕೆ ಬಂದಾಗಲ್ಲೆಲ್ಲ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾನಾಡಿಸುತ್ತಿದ್ರು. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ದಿನಗಳನ್ನು ಗ್ರಾಮಸ್ಥರು ಅಂತಿಮ ಕ್ಷಣದ ಘಟನೆಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಚಪಾತಿ, ಪಲ್ಯ ಮಾಡಿದ್ದೆ, ತಿನ್ನೋಕೆ ಮಗಳೇ ಬರಲಿಲ್ಲ- ನಟಿ ಸೌಜನ್ಯ ತಾಯಿ ಕಣ್ಣೀರು
Advertisement
ತಂದೆ ಪ್ರಭುಮಾದಪ್ಪ ಅವರು ಸೌಜನ್ಯ ಗೆಳೆಯ ವಿವೇಕ್ ಹಾಗೂ ಪಿಎ ಮಹೇಶ್ ಮೇಲೆ ಅನುಮಾನ ವ್ಯಕ್ತಪಡಿಸಿ ಕುಂಬಳಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‍ಐಆರ್ ಕೂಡ ದಾಖಲಾಗಿದೆ. ಆದರೆ, ಆರೋಪವನ್ನು ವಿವೇಕ್, ಪಿ ಮಹೇಶ್ ಅಲ್ಲಗೆಳೆದಿದ್ದಾರೆ. ಗೆಳೆಯ ವಿವೇಕ್ ಜೊತೆ ಮದುವೆ ಪೋಷಕರು ವಿರೋಧಿಸಿದ್ದರು. ಜೊತೆಗೆ, ಸಿನಿಮಾ, ಸೀರಿಯಲ್‍ಗಳಲ್ಲಿ ಅವಕಾಶ ಸಿಗದ ಕಾರಣ ಸೆಲೆಬ್ರಿಟಿ ಜೀವನ ನಡೆಸೋದು ಕಷ್ಟವಾಗಿ ಪೋಷಕರಿಂದ ಹಣ ಪಡೆಯುತ್ತಿದ್ದರು. ಈ ಬಗ್ಗೆ ಸೌಜನ್ಯಗೆ ಕೊರಗಿತ್ತು. ಆರೋಗ್ಯ ಸಮಸ್ಯೆಯೂ ಕಾಡ್ತಿತ್ತು ಅಂತ ಮೂಲಗಳು ತಿಳಿಸಿವೆ. ಸೌಜನ್ಯ ರೂಮ್‍ನಲ್ಲಿದ್ದ ಹಣ, ಮೊಬೈಲ್ ಎಲ್ಲ ಕಾಣೆಯಾಗಿದೆ. ಅವು ಸಿಕ್ಕರೆ ಮತ್ತಷ್ಟು ಸಾಕ್ಷ್ಯ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು