ಬೆಂಗಳೂರು: ಪುನೀತ್ ಅವರು ದೇವರ ಸ್ವರೂಪದಲ್ಲಿದ್ದರು. ಆದರೆ ಅದು ನಮಗೆ ಗೊತ್ತಾಗಲಿಲ್ಲ. ಅವರಲ್ಲಿ ಈಶ್ವರನಂತಹ ನಟರಾಜನ ಕಲೆ, ಲಕ್ಷ್ಮೀ, ಸರಸ್ವತಿ, ಅನ್ನ ಪೂರ್ಣೇಶ್ವರಿ, ಗುರು ರಾಯರಂತಹ ತಾಳ್ಮೆ ಎಲ್ಲ ರೀತಿಯ ದೇವರ ಗುಣಗಳಿದ್ದವು ಎಂದು ನಟಿ ಸೋನು ಗೌಡ ಹೇಳಿದ್ದಾರೆ.
Advertisement
ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ನೋವು ಚಿತ್ರರಂಗವನ್ನು ಕಾಡುತ್ತಿದೆ. ಈ ಮಧ್ಯೆ ಪುನೀತ್ ಜೊತೆ ನಟಿಸಿದ್ದ ನಟಿ ಸೋನುಗೌಡ ಅವರು, ಪುನೀತ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು
Advertisement
Advertisement
ಪುನೀತ್ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಪ್ಪು ಸರ್ ಇನ್ನಿಲ್ಲ ಎಂದು ನನ್ನ ತಂಗಿ ಕರೆ ಮಾಡಿ ಹೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಇಂದಿಗೂ ಅವರ ಸಾವನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಅಪ್ಪು ಅವರ ದೊಡ್ಡ ಅಭಿಮಾನಿ. ನನ್ನನ್ನು ನೀವು ಯಾರ ಜೊತೆ ನಟಿಸಲು ಇಷ್ಟಪಡುತ್ತೀರಾ ಎಂದು ಯಾರಾದರೂ ಕೇಳಿದರೆ ನಾನು ಮೊದಲು ಅಪ್ಪು ಸರ್ ಹೆಸರನ್ನು ಹೇಳುತ್ತಿದೆ. ಇದು ಅವರಿಗೂ ತಿಳಿದಿತ್ತು. ನಾನು ಅವರ ಬಳಿ ಅನೇಕ ಬಾರಿ ನಿಮ್ಮೊಂದಿಗೆ ಚಿತ್ರದಲ್ಲಿ ಕೆಲಸ ಮಾಡಲೇಬೇಕು ನೀವು ನನಗೊಂದು ಅವಕಾಶ ನೀಡಲೇಬೇಕೆಂದು ಹೇಳಿಕೊಂಡಿದ್ದೆ. ಆಗ ಹೊಸ ಸ್ಕ್ರೀಪ್ಟ್ ತೆಗೆದುಕೊಂಡು ಬನ್ನಿ ನಿಮಗೆ ಸೂಟ್ ಆಗುತ್ತದೆ ಎಂದರೆ ಖಂಡಿತ ಅವಕಾಶ ನೀಡುತ್ತೇನೆ ಎಂದಿದ್ದರು ಅಂತ ತಿಳಿಸಿದ್ದಾರೆ.
Advertisement
ನನ್ನ ಮೊದಲ ಮೂವಿ ಇಂತಿ ನಿನ್ನ ಪ್ರೀತಿಯಗೆ ಅಪ್ಪು ಅವರು ಕ್ಲಾಪ್ ಮಾಡಿದ್ದರು. ಪರಮೇಶ ಪಾನವಾಲಾ ಸಿನಿಮಾದ ಶೂಟಿಂಗ್ ವೇಳೆ ಅವರನ್ನು ಸಾಕಷ್ಟು ಬಾರಿ ಭೇಟಿಯಾಗುತ್ತಿದೆ. ಆದಾದ ನಂತರ ಯುವರತ್ನ ಶೂಟಿಂಗ್ ಸಮಯದಲ್ಲಿ ಅವರ ಮನೆಗೆ ಊಟಕ್ಕೆ ಅಂತ ಹೋಗಿದ್ದೆ. ಪುನೀತ್ ಅವರು ತಿಂಡಿ ಪ್ರಿಯರು ಹಾಗಾಗಿ ಯಾವಾಗಲೂ ಏನಾದರೂ ಊಟ ತರಿಸಿಕೊಡುತ್ತಿದ್ದರು. ಯಾವತ್ತು ತಾನೊಬ್ಬ ಸ್ಟಾರ್ ನಟನಂತೆ ನಡೆದುಕೊಂಡಿಲ್ಲ. ಸದಾ ಸ್ನೇಹಿತರಂತೆ ಇರುತ್ತಿದ್ದರು. ಆದರೆ ಇಂದು ಅಪ್ಪು ಅವರು ನನ್ನನ್ನು ಎಲ್ಲಿದಲೋ ನೋಡುತ್ತಿದ್ದಾರೆ. ನಾನು ಮಾಡುತ್ತಿರುವ ಕೆಲಸದಲ್ಲಿದ್ದಾರೆ ಅನಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು
ಒಮ್ಮೆ ಯುವರತ್ನ ಸಿನಿಮಾದಲ್ಲಿ ಒಂದು ಲಾಯರ್ ಪಾತ್ರವಿದೆ ಅಭಿನಯಿಸುತ್ತೀರಾ ಎಂದು ಕರೆಬಂದಿತ್ತು. ನಂತರ ಆಡಿಶನ್‍ಗೆ ಹೋಗಿದ್ದೆ, ಆದ್ರೆ ನೇರವಾಗಿ ಫೋಟೋ ಶೂಟ್ ಮಾಡಿ ನೀವು ಸೆಲೆಕ್ಟ್ ಆಗಿದ್ದೀರಾ ಎಂದು ತಿಳಿಸಿದ್ದರು. ದೇವರ ಅನುಗ್ರಹದಿಂದ ಯುವರತ್ನ ಸಿನಿಮಾದಲ್ಲಿ ಅಪ್ಪು ಅವರೊಂದಿಗೆ ಕೊನೆಗೂ ಅಭಿನಯಿಸಲು ಅವಕಾಶ ಸಿಕ್ಕಿತು. ನನಗೆ ಅಪ್ಪು ಅವರ ಡ್ಯಾನ್ಸ್, ಫೈಟ್ ಅವರು ಮಾತನಾಡುವ ರೀತಿ ನನಗೆ ಬಹಳ ಇಷ್ಟ. ಪುನೀತ್ ಅವರ ಇಷ್ಟು ಸಮಾಜ ಸೇವೆ ಮಾಡಿದ್ದಾರೆ ಅಂತ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
46 ಸಂಖ್ಯೆಗೂ ಪುನೀತ್ ಅವರಿಗೂ ಇರುವ ಸಂಬಂಧವನ್ನೆಲ್ಲಾ ನೋಡುತ್ತಿದ್ದರೆ, ಪುನೀತ್ ಅವರು ದೇವರ ಸ್ವರೂಪದಲ್ಲಿದ್ದರು. ಆದರೆ ಅದು ನಮಗೆ ಗೊತ್ತಾಗಲಿಲ್ಲ ಅನಿಸುತ್ತದೆ. ಅವರಲ್ಲಿ ಈಶ್ವರನಂತಹ ನಟರಾಜನ ಕಲೆ, ಲಕ್ಷ್ಮೀ, ಸರಸ್ವತಿ, ಅನ್ನ ಪೂರ್ಣೇಶ್ವರಿ, ಗುರು ರಾಯರಂತಹ ತಾಳ್ಮೆ ಎಲ್ಲ ರೀತಿಯ ದೇವರ ಗುಣಗಳಿದ್ದವು. ಯಾವತ್ತು ಅವರು ಯಾರಿಗೂ ಬೈದು ಮಾತನಾಡಿಸಲಿಲ್ಲ. ಅಪ್ಪು ಅವರು ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂಬ ಭಾವನೆ ನನಗಿದೆ ಎಂದು ನುಡಿದಿದ್ದಾರೆ.