ಬೆಂಗಳೂರು: ಚಂಬಲ್ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸೋನು ಗೌಡ ನಾಯಕಿಯಾಗಿ ನಟಿಸಿರೋದು ಗೊತ್ತೇ ಇದೆ. ತನಗೆ ಸಿಗೋ ಪಾತ್ರಗಳೆಲ್ಲ ಸವಾಲಿನವುಗಳೇ ಆಗಿರಲಿ ಅನ್ನೋ ಮನಸ್ಥಿತಿ ಹೊಂದಿರುವ ಸೋನು ಚಂಬಲ್ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ನಿರ್ದೇಶಕ ಜೇಕಬ್ ವರ್ಗೀಸ್ ಸಿನಿಮಾ ಅಂದ ಮೇಲೆ ವಿಶೇಷವಾಗಿಯೇ ಇರುತ್ತೆ. ಆ ನಂಬಿಕೆ ಹೊಂದಿರೋ ಸೋನುಗೆ ಅವರ ಕಡೆಯಿಂದಲೇ ನಟಿಸೋ ಆಫರ್ ಬಂದಾಗ ಥ್ರಿಲ್ ಆಗಿತ್ತಂತೆ. ಆದರೆ ಕಥೆ ಕೇಳಿದರೂ ಕೂಡಾ ಒಂದಷ್ಟು ವಿಚಾರಗಳ ಜೊತೆಗೆ ಇದು ಯಾವ ಬಗೆಯ ಸಿನಿಮಾ ಅನ್ನೋದೇ ಅರ್ಥ ಆಗಿರಲಿಲ್ಲವಂತೆ.
ಸೋನು ಗೌಡಗೆ ಚಂಬಲ್ ಚಿತ್ರದ ಅಂತರಾಳ ಅರ್ಥವಾದದ್ದು ಚಿತ್ರೀಕರಣದ ಹಂತದಲ್ಲಿಯೇ. ಈ ಚಿತ್ರದಲ್ಲಿ ಅವರು ಸರಳ ಸಹಜ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಮೇಕಪ್ಪನ್ನು ಮುಖಕ್ಕೆ ಸೋಕಿಸಲೂ ಬಿಟ್ಟಿಲ್ಲವಂತೆ. ಹಾಗೆ ಮಾಡಿದರೆ ಈ ಪಾತ್ರದ ಸಹಜ ಗ್ಲಾಮರ್ ಗೆ ಘಾಸಿಯಾಗುತ್ತೆ ಅನ್ನೋದು ಜೇಕಬ್ ವರ್ಗೀಸ್ ಕಾಳಜಿಯಾಗಿತ್ತು.
ಒಟ್ಟಾರೆಯಾಗಿ ಚಂಬಲ್ ಒಂದು ವಿಶೇಷವಾದ ಚಿತ್ರವಾಗಿ ದಾಖಲಾಗೋದರ ಜೊತೆಗೇ ಭಾರೀ ಗೆಲುವನ್ನೂ ತನ್ನದಾಗಿಸಿಕೊಳ್ಳುತ್ತೆ ಅನ್ನೋ ಭರವಸೆ ಸೋನು ಗೌಡ ಅವರಿಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv