ಫರಿದಾಬಾದ್: ಬಾಲಿವುಡ್ ನಟಿ ಸೋನಂ ಕಪೂರ್ ಮಾವ ನಡೆಸುತ್ತಿದ್ದ ಕಂಪನಿಯಲ್ಲಿ 27 ಕೋಟಿ ರೂ. ವಂಚನೆ ಮಾಡಲಾಗಿತ್ತು. ಈ ಹಿನ್ನೆಲೆ ವಂಚಕರ ಜಾಲವನ್ನು ಹುಡುಕಿ ಸೈಬರ್ ಕ್ರಿಮಿನಲ್ ತಂಡವನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಸೋನಂ, ಮಾವ ಹರೀಶ್ ಅಹುಜಾ ಅವರು ಫರಿದಾಬಾದ್ ಮೂಲದ ಶಾಹಿ ಎಕ್ಸ್ ಪೋರ್ಟ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಇವರ ಕಂಪನಿಯ ರಾಜ್ಯ ಮತ್ತು ಕೇಂದ್ರ ತೆರಿಗೆಗಳ ರಿಯಾಯಿತಿ ಮತ್ತು ಲೆವಿಸ್ ಪರವಾನಗಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ವಂಚಕರು 27 ಕೋಟಿ ರೂ. ವಂಚಿಸಿದ್ದಾರೆ. ಈ ವಂಚಕರು ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರಗಳನ್ನು ಎನ್‍ಕ್ಯಾಶ್ ಮಾಡಿಕೊಂಡು ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
Advertisement
Advertisement
ಫರಿದಾಬಾದ್ ಉಪಪೊಲೀಸ್ ಆಯುಕ್ತ ನಿತೀಶ್ ಅಗರ್ವಾಲ್ ಪ್ರಕರಣ ಕುರಿತು ವಿವರಿಸಿದ್ದು, ಈ ROSCTL ಪರವಾನಗಿಗಳು ಹಲವಾರು ಲಕ್ಷ ರೂಪಾಯಿ ಮೌಲ್ಯದ ಡಿಜಿಟಲ್ ಕೂಪನ್‍ಗಳಿಗೆ ಹೋಲುತ್ತವೆ. ವಂಚಕರು ಅಹುಜಾ ಅವರ ಸಂಸ್ಥೆಯ ಡಿಜಿಟಲ್ ಕೂಪನ್ ಬಳಸಿಕೊಂಡು 27.61 ಕೋಟಿ ರೂ. ವಂಚಿಸಿದ್ದಾರೆ. ವಂಚಕರು ಈ ಕೂಪನ್‍ಗಳನ್ನು ಇತರ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ಎನ್‍ಕ್ಯಾಶ್ ಮಾಡಿಕೊಳ್ಳುತ್ತಿದ್ದರು ಎಂದು ವಿವರಿಸಿದರು.
Advertisement
Advertisement
ಕಳೆದ ವರ್ಷ ಜುಲೈನಿಂದ ಅಹುಜಾ ಅವರು ತಮ್ಮ ಕಂಪನಿಯಲ್ಲಿ ವಂಚನೆ ನಡೆಯುತ್ತಿದೆ ಎಂದು ದೂರುಕೊಟ್ಟಿದ್ದರು. ಅಂದಿನಿಂದ ಪೊಲೀಸರು ಈ ದೂರಿನ ಆಧಾರದ ಮೇಲೆ ಮೌನವಾಗಿಯೇ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಫರಿದಾಬಾದ್ ಪೊಲೀಸರು ದೆಹಲಿ, ಮುಂಬೈ, ಚೆನ್ನೈ ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ಸ್ಥಳಗಳಿಂದ ಒಟ್ಟು ಒಂಬತ್ತು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಕೆಲವು ಆರೋಪಿಗಳಲ್ಲಿ ನಿವೃತ್ತ ಗುಮಾಸ್ತರು ಮತ್ತು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ ಉದ್ಯೋಗಿಗಳು, ತಾಂತ್ರಿಕತೆಗಳು ಮತ್ತು DGFT ಕೆಲಸದಲ್ಲಿ ಚೆನ್ನಾಗಿ ಪರಿಣತಿ ಹೊಂದಿದ್ದಾರೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳನ್ನು ದೆಹಲಿಯ ನಿವಾಸಿಗಳಾದ ಮನೋಜ್ ರಾಣಾ, ಮನೀಶ್ ಕುಮಾರ್, ಪ್ರವೀಣ್ ಕುಮಾರ್, ಲಲಿತ್ ಕುಮಾರ್ ಜೈನ್ ಮತ್ತು ಮನೀಶ್ ಕುಮಾರ್ ಮೊಗಾ ಜೊತೆಗೆ ಮುಂಬೈನ ಭೂಷಣ್ ಕಿಶನ್ ಠಾಕೂರ್ ಮತ್ತು ಚೆನ್ನೈನ ಸುರೇಶ್ ಕುಮಾರ್ ಜೈನ್. ಇನ್ನಿಬ್ಬರನ್ನು ಕರ್ನಾಟಕದ ರಾಯಚೂರಿನ ಗಣೇಶ್ ಪರಶುರಾಮ್, ರಾಯಗಢದ ರಾಹುಲ್ ರಘುನಾಥ್ ಮತ್ತು ಪುಣೆಯ ಸಂತೋಷ್ ಸೀತಾರಾಮ್ ಎಂದು ಗುರುತಿಸಲಾಗಿದೆ.
ಆರೋಪಿಗಳಾದ ಮನೋಜ್ ರಾಣಾ, ಮನೀಶ್ ಕುಮಾರ್, ಪ್ರವೀಣ್ ಕುಮಾರ್ ಮತ್ತು ಮನೀಶ್ ಕುಮಾರ್ ಮೊಗಾ ಈ ಹಿಂದೆ ಡಿಜಿಎಫ್‍ಟಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದ್ದು, ನಿರ್ದೇಶನಾಲಯದ ಕಾರ್ಯಚಟುವಟಿಕೆಯಲ್ಲಿ ಚೆನ್ನಾಗಿ ಪರಿಣತಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದರು.