ಮುಂಬೈ: ಬಹುಭಾಷಾ ನಟಿ ಸೋನಾಲಿ ಬೇಂದ್ರೆ ಭಯಾನಕ ಕಾಯಿಲೆ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದಾರೆ.
ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ನ್ಯೂಯಾರ್ಕ್ ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ತಮಗೆ ಕ್ಯಾನ್ಸರ್ ಇರೋದನ್ನು ರಿವೀಲ್ ಮಾಡಿರುವ ಸೋನಾಲಿ ತಮ್ಮ ಮನದಾಳದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Advertisement
ಸೋನಾಲಿ ತಮ್ಮದೊಂದು ಫೋಟೋವನ್ನು ಹಾಕಿ ಅದಕ್ಕೆ, “ನಾವು ಜೀವನದಲ್ಲಿ ಹೆಚ್ಚು ವಿಶ್ವಾಸವನ್ನಿಟ್ಟಾಗ ಆಗ ಜೀವನ ದೊಡ್ಡದೊಂದು ಆಘಾತ ನೀಡುತ್ತದೆ. ನನಗೆ ಹೈ ಗ್ರೇಡ್ ಕ್ಯಾನ್ಸರ್ ಇದೆ ಎಂಬುದು ನನಗೆ ಇತ್ತೀಚಿಗೆ ತಿಳಿಯಿತು. ಈ ವಿಷಯ ತಿಳಿದು ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನ ಜೊತೆಯಲ್ಲೇ ಇದ್ದಾರೆ. ನಾನು ಇವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ಕ್ಯಾನ್ಸರ್ ಇರುವ ವಿಷಯ ತಿಳಿದು ನನಗೆ ಬೇರೆ ದಾರಿ ತಿಳಿಯದೇ ನಾನು ನನ್ನ ವೈದ್ಯರು ಹೇಳಿದಂತೆ ನ್ಯೂಯಾರ್ಕ್ ಹೋಗುವುದಾಗಿ ನಿರ್ಧರಿಸಿದ್ದೇನೆ. ನ್ಯೂಯಾರ್ಕ್ ನಲ್ಲಿ ನಾನು ಚಿಕಿತ್ಸೆ ಪಡೆದ ನಂತರ ಈ ಎಲ್ಲ ಕಷ್ಟಗಳಿಂದ ಹೊರ ಬರುವುದಕ್ಕೆ ಪ್ರಯತ್ನಿಸುತ್ತೇನೆ. ಕೆಲವು ದಿನಗಳಿಂದ ಜನರು ನನ್ನನ್ನು ಸಾಕಷ್ಟು ಇಷ್ಟ ಪಟ್ಟಿದ್ದಾರೆ. ಎಲ್ಲರ ಪ್ರೀತಿಯನ್ನು ಪಡೆದುಕೊಂಡು ನಾನು ಸಂತೋಷವಾಗಿದ್ದೇನೆ. ನನ್ನ ಜೊತೆ ನನ್ನ ಕುಟುಂಬದವರು ನನ್ನ ಧೈರ್ಯವಾಗಿ ನಿಂತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
Advertisement
ಕಳೆದ ತಿಂಗಳು ಸೋನಾಲಿ ಹಿಂದುಜಾ ಸರ್ಜಿಕಲ್ ಹೆಲ್ತ್ ಕೇರ್ ಗೆ ದಾಖಲಾಗಿದ್ದರು. ಸೋನಾಲಿ ಪ್ರತಿ ಹಂತದಲ್ಲೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರೋದಾಗಿ ತಮ್ಮ ನೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಬೇಗ ಗುಣಮುಖರಾಗಿ ಸ್ವದೇಶಕ್ಕೆ ವಾಪಾಸ್ಸಾಗಿ ಎಂದು ಭಾರತದಲ್ಲಿ ಅಭಿಮಾನಿಗಳು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಸೋನಾಲಿ ಕನ್ನಡದಲ್ಲಿ ಶಿವರಾಜ್‍ಕುಮಾರ್ ಮತ್ತು ಉಪೇಂದ್ರ ಜೊತೆ `ಪ್ರೀತ್ಸೆ’ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಅಲ್ಲದೇ ಹಿಂದಿಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಹಮ್ ಸಾಥ್ ಸಾಥ್ ಹೈ, ಸರ್ಫರೋಶ್, ಕಲ್ ಹೋ ನಾ ಹೋ ಹೀಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮದುವೆಯಾದ್ಮೇಲೆ ಚಿತ್ರರಂಗದಿಂದ ದೂರವಿದ್ದ ಸೋನಾಲಿ ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.