ನಟಿ ಸೋನಲ್ (Sonal) ಮಾಂಥೆರೋ ನಿರ್ದೇಶಕ ತರುಣ್ ಸುಧೀರ್ (Tarun Sudhir) ಜೊತೆ ಆಗಸ್ಟ್ ೧೦ ರಂದು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ರು. ಇದೀಗ ಸೋನಲ್ ತರುಣ್ ಜೋಡಿಗೆ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರವೂ ಒಂದಾಗುತ್ತಿದ್ದಾರೆ. ಸೋನಲ್ ಹುಟ್ಟೂರು ಮಂಗಳೂರಿನಲ್ಲಿ ಸಪ್ಟೆಂಬರ್ 1 ರಂದು ಚರ್ಚ್ನಲ್ಲಿ ವಿವಾಹ ನಡೆಯಲಿಒದೆ. ಬಳಿಕ ಪ್ರತಿಷ್ಟಿತ ಕನ್ವೆಂಷನ್ ಹಾಲ್‌ನಲ್ಲಿ ಆರತಕ್ಷತೆ ನಡೆಸಲು ತಯಾರಿ ನಡೆದಿದೆ.
ಕ್ರಿಶ್ಚಿಯನ್ ಸಂಪ್ರದಾಯದ ಹಲವೆಡೆ ಮಧುಮಗಳಿಗೆ ರೋಸ್ ಸೆಲೆಬ್ರೇಷನ್ (Rose Celebration) ಮಾಡುವ ಪದ್ಧತಿ ಇದೆ. ಅದರ ಪ್ರಕಾರ ಸೋನಲ್‌ಗೆ ರೋಸ್ ಸೆಲೆಬ್ರೇಷನ್ ಕಾರ್ಯಕ್ರಮವನ್ನೂ ಮಾಡಲಾಗಿದೆ. ತಾಯಿ-ಬಂಧುಗಳು ಹಾಗೂ ಗೆಳತಿಯರ ಜೊತೆ ನವವಧು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಪೂರ್ವ ಕಾರ್ಯಗಳಲ್ಲಿ ಪಾಲ್ಗೊಂಡ್ರು. ಹಳದಿ ಬಣ್ಣದ ಪಾರ್ಟಿವೇರ್ ಉಡುಗೆಯಲ್ಲಿ ಸೋನಲ್ ನಳನಳಿಸಿದ್ದಾರೆ.
ಅಂತರ್‌ಧರ್ಮೀಯ ಮದುವೆಯಾದ ತರುಣ್ ಸೋನಲ್ ಎರಡೂ ಕಡೆಯ ಸಂಪ್ರದಾಯವನ್ನ ಪಾಲಿಸುವ ಸಲುವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದ ರೀತಿ ಮದುವೆಯಗುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮವನ್ನ ಖಾಸಗಿಯಾಗಿ ನೆರವೇರಿಸಲು ಪ್ಲ್ಯಾನ್ ಮಾಡಿಕೊಂಡಿರುವ ತರುಣ್ ಸೋನಲ್ ಜೋಡಿ ಅಲ್ಲಿನ ಜನರಿಗಷ್ಟೇ ಆಹ್ವಾನ ನೀಡಿದೆ.