ಕಾಟೇರ, ರಾಬರ್ಟ್ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್‌ಗೆ (Tharun Sudhir) ಇಂದು (ಅ.9) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ (Sonal) ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಯುವ ರಾಜ್‌ಕುಮಾರ್‌ಗೆ ರೋಹಿತ್ ಪದಕಿ ಆ್ಯಕ್ಷನ್ ಕಟ್
View this post on Instagram
ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಅದಕ್ಕೆ ತರುಣ್ ಕೂಡ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಲವ್ ಎಂದಿದ್ದಾರೆ.
ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ನಟಿ ಭೇಟಿ ನೀಡಿದ್ದಾರೆ. ಅಂದಹಾಗೆ, ಆಗಸ್ಟ್ 11ರಂದು ತರುಣ್ ಮತ್ತು ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.