ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಹಲವು ವರ್ಷಗಳ ನಂತರ ಈಗ ‘ಹೀರಾಮಂಡಿ’ (Heeramandi) ವೆಬ್ ಸಿರೀಸ್ ಮೂಲಕ ಸಕ್ಸಸ್ ಸಿಕ್ಕಿದೆ. ‘ದಬಾಂಗ್’ ನಟಿಗೆ ಬೇಡಿಕೆ ಕೂಡ ಜಾಸ್ತಿ ಆಗಿದೆ. ಹೀಗಿರುವಾಗ ಅವರ ಫಿಟ್‌ನೆಸ್ ಬಗ್ಗೆ ಹೊಸ ವಿಚಾರವೊಂದು ರಿವೀಲ್ ಆಗಿದೆ. 90 ಕೆಜಿ ಇದ್ದ ಸೋನಾಕ್ಷಿ 30 ಕೆಜಿ ದೇಹ ತೂಕ ಇಳಿಸಿಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ.
2010ರಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗುವ ಮೂಲಕ ಸೋನಾಕ್ಷಿ ಸಿನ್ಹಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಸೋನಾಕ್ಷಿ ಚಿತ್ರರಂಗಕ್ಕೆ ಬರುವ ಮುನ್ನ ಸಖತ್ ದಪ್ಪ ಇದ್ದರು. ಅವರ ದೇಹದ ತೂಕ 90 ಕೆಜಿ ಇತ್ತು. ಅವರು 30 ಕೆಜಿಗೂ ಅಧಿಕ ತೂಕವನ್ನು ಇಳಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿಶೇಷ ಅಭಿಮಾನಿಯ ಉಡುಗೊರೆ ಮೆಚ್ಚಿ, ಸುದೀಪ್ ಕೊಟ್ಟರು ಭರ್ಜರಿ ಗಿಫ್ಟ್
ನಟಿ ಜಿಮ್ ಸೇರಿದರು. ನಿತ್ಯ ಒಂದಷ್ಟು ಸಮಯವನ್ನು ಅವರು ಜಿಮ್‌ನಲ್ಲಿ ಕಳೆಯುತ್ತಿದ್ದರು. ಹಲವು ರೀತಿಯ ವರ್ಕೌಟ್ ಮಾಡಿ ಬೆವರು ಸುರಿಸುತ್ತಿದ್ದರು. ಇದರ ಎಫೆಕ್ಟ್ ಹಂತ ಹಂತವಾಗಿ ತೂಕ ಕಳೆದುಕೊಳ್ಳುತ್ತಾ ಬಂದರು. 60ರ ಆಸುಪಾಸಿನಲ್ಲಿರುವ ಸಲ್ಮಾನ್ ಖಾನ್ ಫಿಟ್‌ನೆಸ್ ನೋಡಿ ಸಾಕಷ್ಟು ಸ್ಫೂರ್ತಿ ಸಿಕ್ಕಿತ್ತು ಎಂದು ಖುಷಿಯಿಂದ ನಟಿ ಅನುಭವ ಹಂಚಿಕೊಂಡಿದ್ದಾರೆ.
ಈ ಹಿಂದಿನ ಅವರ ಫೋಟೋವನ್ನು ಇಟ್ಟುಕೊಂಡು ಸಾಕಷ್ಟು ಟ್ರೋಲ್ ಮಾಡುತ್ತಿದ್ದರು. ಆಮ್ಲೆಟ್ ತಿನ್ನಬೇಕು ಎನಿಸಿದರೆ ಮಾಡಿಕೊಂಡು ತಿನ್ನಿ. ಆದರೆ ಮೊಟ್ಟೆಯ ಶೇಪ್ ಹಾಗಿದೆ, ಹೀಗಿದೆ ಎಂದೆಲ್ಲಾ ಹೇಳಬೇಡಿ ಎಂದು ನಟಿ ತಿರುಗೇಟು ನೀಡಿದ್ದರು.