ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೋನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಸ್ಪರ್ಧಿ ಜೊತೆ ಸೋನಾಕ್ಷಿ ಸಿನ್ಹಾ ಭಾಗವಹಿಸಿದ್ದರು. ಈ ವೇಳೆ ನಿರೂಪಕ, ನಟ ಅಮಿತಾಬ್ ಬಚ್ಚನ್ ಅವರು, “ರಾಮಾಯಣದಲ್ಲಿ ಹನುಮಂತ ಸಂಜೀವಿನಿಯನ್ನು ಯಾರಿಗೆ ತಂದು ಕೊಡುತ್ತಾನೆ?” ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಸೋನಾಕ್ಷಿ ಸಿನ್ಹಾ ಅವರಿಗೆ ಉತ್ತರ ತಿಳಿದಿರಲಿಲ್ಲ. ಹಾಗಾಗಿ ಅವರು ಈ ಪ್ರಶ್ನೆಗೆ ಉತ್ತರ ನೀಡಲು ಲೈಫ್ ಲೈನ್ ಬಳಸಿದ್ದಾರೆ. ಸದ್ಯ ಇದನ್ನು ಗಮನಿಸಿದ ನೆಟ್ಟಿಗರು ಸೋನಾಕ್ಷಿ ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.
#YoSonakshiSoDumb #SonakshiSinhaInKBC
Sad for @sonakshisinha ???????? pic.twitter.com/BfMMw8SBbb
— SHIVAM (@Abeyshivam) September 21, 2019
ಕೆಲವರು ‘ಲಕ್ಷಣ ಶೂರ್ಪನಕಿ ಮೂಗು ಕತ್ತರಿಸಿದ್ದರೆ, ಸೋನಾಕ್ಷಿ ತಮ್ಮ ತಂದೆ ಶತ್ರುಘ್ನ ಸಿನ್ಹಾ ಅವರ ಮೂಗು ಕತ್ತರಿಸಿದ್ದಾರೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಟಿರಾದ ಆಲಿಯಾ ಭಟ್ ಹಾಗೂ ಅನನ್ಯ ಪಾಂಡೆ ಸೋನಾಕ್ಷಿ ಅವರನ್ನು ತಮ್ಮ ಕ್ಲಬ್‍ಗೆ ಸ್ವಾಗತ ಮಾಡುತ್ತಿರುವಂತೆ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.
https://twitter.com/HijabFatma6/status/1175329309059248129?ref_src=twsrc%5Etfw%7Ctwcamp%5Etweetembed%7Ctwterm%5E1175329309059248129&ref_url=https%3A%2F%2Fwww.jagran.com%2Fentertainment%2Fbollywood-sonakshi-sinha-meme-and-jokes-are-going-viral-on-social-media-on-her-reaction-on-kbc-11-ramayan-questions-19601924.html
ಟ್ರೋಲ್ ಆಗುತ್ತಿದಂತೆ ಸೋನಾಕ್ಷಿ ತಮ್ಮ ಟ್ವಿಟ್ಟರಿನಲ್ಲಿ, “ಶಾಲೆಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ನಿಮ್ಮ ಬಳಿ ಯಾವುದೇ ಕೆಲಸ ಇಲ್ಲದಿದ್ದರೆ ಅಥವಾ ನಿಮ್ಮ ಬಳಿ ಹೆಚ್ಚು ಸಮಯ ಇದ್ದರೆ ಈ ಬಗ್ಗೆ ಮಿಮ್ಸ್ ಮಾಡಿ. ನನಗೆ ಮಿಮ್ಸ್ ಎಂದರೆ ತುಂಬಾ ಇಷ್ಟ” ಎಂದು ಟ್ವೀಟ್ ಮಾಡುವು ಮೂಲಕ ಪ್ರತಿಕ್ರಿಯಿಸಿದ್ದಾರೆ.
https://twitter.com/sonakshisinha/status/1175328973653282816