ಕಿರುತೆರೆಯ ಖ್ಯಾತ ನಟಿ, ನಿರೂಪಕಿ ಸ್ನೇಹಲ್ ರೈ (Snehal Rai) ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಈವರೆಗೂ ಮದುವೆಯ (Marriage) ಬಗ್ಗೆ ಮಾತನಾಡದೇ ಇರುವ ಸ್ನೇಹಲ್, ಮೊನ್ನೆಯಷ್ಟೇ ಅದರ ಬಗ್ಗೆ ಕುರುಹು ನೀಡಿದ್ದರು. ಇದೀಗ ಹತ್ತು ವರ್ಷಗಳ ಹಿಂದೆಯೇ ತಾವು ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ.
ತಮಗಿಂತ ವಯಸ್ಸಿನಲ್ಲಿ 21 ವರ್ಷ ಹಿರಿಯರಾಗಿರುವ ರಾಜಕಾರಣಿಯನ್ನು (Politician) ಹತ್ತು ವರ್ಷಗಳ ಹಿಂದೆಯೇ ತಾವು ಮದುವೆ ಆಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಅದಕ್ಕೂ ಮೊದಲು ಅನುಮಾನ ಮೂಡಿಸುವಂತಹ ಬರಹವನ್ನು ಅವರು ಹಂಚಿಕೊಂಡಿದ್ದರು. ಆ ಮೂಲಕ ಮದುವೆಯ ವಿಚಾರವನ್ನು ಹೊರ ಹಾಕಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಲ್, ‘ವಿವಾಹಿತ ಮಹಿಳೆಯರಿಗಾಗಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವೆ’ ಎಂದು ಅವರು ಬರೆದುಕೊಂಡಿದ್ದರು. ಆಗ ಅಭಿಮಾನಿಗಳು, ‘ನಿಮಗೆ ಮದುವೆಯೇ ಆಗಿಲ್ಲ, ಅದು ಹೇಗೆ ಸಾಧ್ಯ?’ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರವಾಗಿ ಪತಿಯೊಂದಿಗಿನ ಫೋಟೋವನ್ನೂ ಅವರು ಹಂಚಿಕೊಂಡಿದ್ದರು. ಇದನ್ನೂ ಓದಿ:ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ
ಹತ್ತು ವರ್ಷಗಳ ಹಿಂದೆ ಮಧ್ವೇಂದ್ರ ಕುಮಾರ್ ರೈ (Madhvendra Kumar Rai) ಎನ್ನುವ ರಾಜಕಾರಣಿಯ ಜೊತೆ ಮದುವೆ ಆಗಿರುವುದಾಗಿ ಸ್ನೇಹಲ್ ರೈ ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರವೊಂದರಲ್ಲಿ ತಮ್ಮಿಬ್ಬರ ಭೇಟಿ ಆಯಿತು ಎಂದು, ನಂತರ ಕುಟುಂಬದ ಸಮ್ಮತಿಯೊಂದಿಗೆ ಮದುವೆ ಆಗಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಪತಿ ಮತ್ತು ತಮ್ಮ ನಡುವಿನ ವಯಸ್ಸಿನ ಅಂತರವನ್ನೂ ಅವರು ಹೇಳಿದ್ದಾರೆ.
ಜನ್ಮೋ ಕಾ ಬಂಧನ್, ಪರ್ಫೆಕ್ಟ್ ಪತಿ ಸೇರಿದಂತೆ ಹಲವು ಶೋಗಳಲ್ಲಿ ಭಾಗಿಯಾಗಿರುವ ಸ್ನೇಹಲ್, ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಲ್ಲದೇ, ಅವರೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯನ್ನೂ ನಡೆಸುತ್ತಿದ್ದಾರೆ.