ಜೋಶ್ (Josh) ಸಿನಿಮಾ, ಬಿಗ್ ಬಾಸ್ ಶೋ (Bigg Boss Kannada) ಮೂಲಕ ಗಮನ ಸೆಳೆದ ಸ್ನೇಹ ಆಚಾರ್ಯ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಗಂಡು ಮಗುವಿಗೆ ಸ್ನೇಹಾ ಆಚಾರ್ಯ ಜನ್ಮ ನೀಡಿದ್ದಾರೆ. 10 ದಿನ ಲೇಟ್ ಆಗಿ ಮಗು ಹುಟ್ಟಿತು ಅಂತಾ ಸಂತಸದ ಸುದ್ದಿಯನ್ನ ಸೋಷಿಯಲ್ ಮೀಡಿಯಾ ಮೂಲಕ ನಟಿ ಸ್ನೇಹಾ ಹೇಳಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ತಾವು ತಾಯಿಯಾಗಿರುವ ವಿಚಾರವನ್ನು ವಿಶೇಷ ಫೋಟೋಗಳ ಮೂಲಕ ನಟಿ ಹೇಳಿದ್ದರು. ಬಳಿಕ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದರು. ಈಗ ಮನೆಗೆ ಹೊಸ ಅತಿಥಿಯ ಆಗಮನ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ.
ಅದ್ಭುತವಾದ ಹೊಸ ಜಗತ್ತಿಗೆ ಕಾಲಿಟ್ಟಿದ್ದೇವೆ. ಬೇಬಿ ರಾಯಿಕ್ ನನಗೆ ತುಂಬ ಕ್ಲೋಸ್ ಆಗಿದ್ದಾನೆ, ನನಗೆ ಕೊಟ್ಟ ಡೇಟ್ ಮುಗಿದು 10 ದಿನಗಳ ಬಳಿಕ, ಅಪ್ಪಂದಿರ ದಿನ ಬರುವ ಸಮಯಕ್ಕೆ ಹುಟ್ಟಿದ್ದಾನೆ. ರಾಯಿಕ್ ಅಂದರೆ ಹೀರೋಯಿಕ್ ಎಂದೂ ಕೂಡ ಉಚ್ಛರಿಸಬಹುದು. ಬೆಳಕಿನ ಹೀರೋ ಎಂದರ್ಥ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪ- ಅಮ್ಮನ ಕ್ಯೂಟ್ ಲವ್ ಸ್ಟೋರಿ ಹಂಚಿಕೊಂಡು ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ವಿಶ್
ಸ್ನೇಹಾ ಅವರ ಪೋಸ್ಟ್‌ಗೆ ಆಲ್‌ಓಕೆ, ನಟಿ ನಯನಾ ಪುಟ್ಟಸ್ವಾಮಿ, ಇನ್ನುಳಿದ ಸೆಲೆಬ್ರಿಟಿಗಳು, ಅಭಿಮಾನಿಗಳು ಕೂಡ ಶುಭಾಶಯ ತಿಳಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಸ್ನೇಹಾ ಅವರು ರಷ್ಯಾ ಮೂಲದ ರಾಯನ್ ಅವರು ಪರಸ್ಪರ ಪ್ರೀತಿಸಿ, 2018ರಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಈ ಮದುವೆಯಲ್ಲಿ ಇವರಿಬ್ಬರ ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರು ಭಾಗಿಯಾಗಿದ್ದರು. ರಾಯನ್ ಅವರು ಅಮೆರಿಕದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.