‘ಯುಗಳಗೀತೆ’ ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಿರಿ ಪ್ರಹ್ಲಾದ್ (Siri Prahlad) ಅವರು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಮಧುಸೂದನ್ ಜೊತೆ ನಟಿ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್‌ಗೆ ‘ಭಜರಂಗಿ’ ಹರ್ಷ ಆ್ಯಕ್ಷನ್ ಕಟ್- ಪೋಸ್ಟರ್ ಔಟ್
‘ಯುಗಳಗೀತೆ’ ಸೀರಿಯಲ್‌ನಲ್ಲಿ ಜೊತೆಯಾಗಿ ಸಿರಿ ಮತ್ತು ಮಧುಸೂದನ್ ನಟಿಸಿದರು. ಈ ಪರಿಚಯವೇ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಪ್ರೀತಿಗೆ ಈ ಜೋಡಿ ಮದುವೆಯ ಮುದ್ರೆ ಒತ್ತಿದ್ದಾರೆ. ಈ ಮದುವೆಗೆ ‘ದಿಯಾ’ ನಟಿ ಖುಷಿ ರವಿ, ಆಶಿಕಾ ರಂಗನಾಥ್ ಕುಟುಂಬ, ತೇಜಸ್ವಿನಿ ಶರ್ಮಾ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.
View this post on Instagram
ಇನ್ನೂ ಲಾ, ಇಷ್ಟ, ಬಡ್ಡೀಸ್, ಒಂದು ಶಿಕಾರಿಯ ಕಥೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಿರಿ ಪ್ರಹ್ಲಾದ್ ನಟಿಸಿದ್ದಾರೆ. ಮಧುಸೂದನ್ ಮೇಡ್ ಇನ್ ಬೆಂಗಳೂರು ಚಿತ್ರದಲ್ಲಿ ನಟಿಸಿದ್ದಾರೆ.