ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಯುಗಳಗೀತೆ’ ನಟಿ ಸಿರಿ, ಮಧುಸೂದನ್

Public TV
1 Min Read
siri

ಟಿ ಸಿರಿ ಪ್ರಹ್ಲಾದ್ (Siri Prahlad) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಯುಗಳಗೀತೆ’ ಹೀರೋ ಮಧುಸೂದನ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಂಗೇಜ್ ಆಗಿರುವ ಬಗ್ಗೆ ಸ್ಪೆಷಲ್ ವಿಡಿಯೋ ಶೇರ್ ಮಾಡಿ ಸಿಹಿಸುದ್ದಿ ತಿಳಿಸಿದ್ದಾರೆ.

siri

2017ರಲ್ಲಿ ಪ್ರಸಾರವಾಗುತ್ತಿದ್ದ ‘ಯುಗಳಗೀತೆ’ (Yugalageethe) ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಸಿರಿ, ಮಧುಸೂದನ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫ್ರೆಂಡ್ಸ್ ಆಗಿದ್ದವರು ಫ್ಯಾಮಿಲಿಯಾಗುತ್ತಿದ್ದೇವೆ ಎಂದು ಸಿರಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:‘ಲಾಲ್ ಸಲಾಂ’ ಸೋಲಿನ ಎಫೆಕ್ಟ್- ಲೋಕೇಶ್ ಕನಕರಾಜ್‌ಗೆ ತಲೈವಾ ವಾರ್ನಿಂಗ್

 

View this post on Instagram

 

A post shared by Siri Prahlad (@siri_prahlad)

2017ರಿಂದ ಸಿರಿ- ಮಧುಸೂದನ್ ಅವರು ಸ್ನೇಹಿತರು. ಇಷ್ಟು ವರ್ಷಗಳ ಕಾಲ ಇವರಿಬ್ಬರು ಬೇರೆ ಬೇರೆ ಪ್ರಾಜೆಕ್ಟ್ ಮಾಡುತ್ತಿದ್ದರು. ಯುಗಳಗೀತೆ ಸೀರಿಯಲ್ ಸಮಯದಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿದೆ. ಇದೀಗ ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ.

ಸಿರಿ ಅವರು ಈಗಾಗಲೇ ‘ಲಾ’, ‘ಇಷ್ಟ’, ‘ಬಡ್ಡೀಸ್’, ಒಂದು ಶಿಕಾರಿಯ ಕಥೆ, ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಧುಸೂದನ್ ಅವರು ‘ಮೇಡ್ ಇನ್ ಬೆಂಗಳೂರು’ ಸಿನಿಮಾವನ್ನು ಮಾಡಿದ್ದಾರೆ.

Share This Article