ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ಅವರು ಇದೀಗ ನಿರ್ಮಾಪಕರೊಬ್ಬರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. “ಹೀಗೊಂದು ದಿನ” ಚಿತ್ರದ ನಿರ್ಮಾಪಕ ಚಂದ್ರಶೇಖರ್ ವಿರುದ್ಧ ಆರೋಪ ಮಾಡಿರುವ ಸಿಂಧು ಲೋಕನಾಥ್ ಅವರ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ.
ನಿರ್ಮಾಪಕರು ಸಿಂಧೂ ಅವರಿಗೆ ಎರಡು ಲಕ್ಷ ರೂ. ಸಂಭಾವನೆಯ ಚೆಕ್ ನೀಡಿದ್ದರು. ಆದ್ರೆ ಚೆಕ್ ಅನ್ನು ಸಿಂಧು ಅವರು ಬ್ಯಾಂಕ್‍ಗೆ ಸಲ್ಲಿಸಿದಾಗ ಬೌನ್ಸ್ ಆಗಿದೆ. ಹೀಗಾಗಿ ನಟಿ, ನಿರ್ಮಾಪಕರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ.
ಸಿನಿಮಾ ಮಾರ್ಚ್ ನಲ್ಲೇ ರಿಲೀಸ್ ಆದ್ರೂ ಸಂಭಾವನೆ ಮಾತ್ರ ಇನ್ನೂ ಕ್ಲಿಯರ್ ಆಗಿಲ್ಲ ಅಂತ ನಟಿ ಆರೋಪ ಮಾಡುತ್ತಿದ್ದಾರೆ. ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿಯ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್, ಮಿತ್ರ, ಗಿರಿ, ಬಾಲಾಜಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಗುಪ್ತ ಸಂಗೀತ ನೀಡಿದ್ದಾರೆ. ರಾಮಕೃಷ್ಣ ರಣಗಟ್ಟಿ ಗೀತ ಸಾಹಿತ್ಯ ನೀಡಿದ್ದಾರೆ. ವಿಕಾಸ್ ಅವರ ಕಥೆಗೆ, ನಿರ್ದೇಶಕ ವಿಕ್ರಮ್ ಯೋಗಾನಂದ್ ಅವರೇ ಛಾಯಾಗ್ರಹಕರು, ಸಂಕಲನಕಾರರು ಹಾಗೂ ವಿಷುವಲ್ ಎಫೆಕ್ಟ್ ಸಹ ನೀಡಿದ್ದಾರೆ. ಇದನ್ನೂ ಓದಿ: ಮದ್ವೆ ನಂತರ ಸಿಂಧು ಲೋಕನಾಥ್ ಬಾಳಲ್ಲಿ ‘ಹೀಗೊಂದು ದಿನ’
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv