ಸ್ಯಾಂಡಲ್‌ವುಡ್‌ನ (Sandalwood) ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivastav) ಅವರು ‘ರಾಘವೇಂದ್ರ ಸ್ಟೋರ್ಸ್’ (Ragavendra Stores) ಚಿತ್ರದ ಮೂಲಕ ಇತ್ತೀಚಿಗೆ ಸದ್ದು ಮಾಡಿದ್ದರು. ಈಗ ಹೊಸ ಫೋಟೋಶೂಟ್‌ನಲ್ಲಿ ನಟಿ ಹಾಟ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಕಡಲ ಕಿನಾರೆಯಲ್ಲಿ ‘ಬಿಗ್ ಬಾಸ್’ ದೀಪಿಕಾ ದಾಸ್
ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ, ಫೇರ್ & ಲವ್ಲಿ, ಹೋಪ್ (Hope) ಸೇರಿದಂತೆ ಹಲವು ಸಿನಿಮಾಗಳ ಮೂಲಕ ಶ್ವೇತಾ ಶ್ರೀವಾತ್ಸವ್ ಅವರು ಗಮನ ಸೆಳೆದಿದ್ದರು. ಮದುವೆ ಬಳಿಕ ಮಗಳ ಆಗಮನ ನಂತರ ನಟನೆಯಿಂದ ದೂರ ಸರಿದಿದ್ದರು.
ಇತ್ತೀಚಿಗೆ ತೆರೆಕಂಡ ‘ರಾಘವೇಂದ್ರ ಸ್ಟೋರ್ಸ್ ನವರಸ ನಾಯಕ ಜಗ್ಗೇಶ್‌ಗೆ ಜೋಡಿಯಾಗುವ ಶ್ವೇತಾ ಶ್ರೀವಾತ್ಸವ್ ಮೋಡಿ ಮಾಡಿದ್ದರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ನಟಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.
View this post on Instagram
ಪಿಂಕ್ ಬಣ್ಣದ ಡ್ರೆಸ್ ಧರಿಸಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಮದುವೆಯಾಗಿ ಒಂದು ಮಗು ಇದ್ದರೂ ಶ್ವೇತಾ ಫಿಟ್‌ನೆಸ್‌ಗೆ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.