Connect with us

Districts

ನಂಗೆ ಕಹಿ ಘಟನೆ ಆಗಿಲ್ಲ, ಮೀಟೂ ಬಂದಿರೋದು ಬೇಜಾರಾಗಿದೆ- ನಟಿ ಶುಭಾ ಪುಂಜಾ

Published

on

ಹುಬ್ಬಳ್ಳಿ: ಮೀಟೂ ಬಂದಿರೋದು ನನಗೂ ಒಂದು ಕಡೆ ಬೇಜಾರಾಗಿದೆ ಎಂದು ನಟಿ ಶುಭ ಪೂಂಜಾ ಬೇಸರ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಶುಭಾ ಪುಂಜಾ ಮಾಧ್ಯಮಗಳೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗ ಹೆಣ್ಣು ಮಕ್ಕಳಿಗೆ ಬಹಳ ಗೌರವ ನೀಡುತ್ತೆ. ಈಗ ಮೀಟೂ ಬಂದಿರೋದು ನನಗೆ ಬೇಜಾರಾಗಿದೆ. ಮೀಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಬಗೆಹರಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ನಾನು 10-12 ವರ್ಷಗಳಿಂದ ಇದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳ ಪ್ರೀತಿ, ಗೌರವ ನನಗೆ ಸಿಕ್ಕಿದೆ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ ಕಹಿ ಅನುಭವಗಳು ಆಗಿಲ್ಲ ಎಂದು ತಿಳಿಸಿದರು.

ಎಲ್ಲಾ ರಂಗಗಳಲ್ಲೂ ಮೀಟೂ ಅಂತಹ ಕಹಿ ಅನುಭವದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಕಹಿ ಅನುಭವಗಳಿಂದ ನೋವಾಗಿರುವವರು ಧ್ವನಿ ಎತ್ತುತ್ತಿದ್ದಾರೆ. ಸಿನಿ ರಂಗದಲ್ಲಿ ಈ ಪ್ರಕರಣಗಳನ್ನು ನೋಡಿಕೊಳ್ಳಲು ಹಿರಿಯರು ಇದ್ದಾರೆ. ಅವರು ಈ ಪ್ರಕರಣಗಳನ್ನು ಬಗೆಹರಿಸಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸ್ತಾರೆ ಎಂದು ಹೇಳಿದರು.

ನಟಿ ಸಂಜನಾ ಕ್ಷಮೆ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶುಭಾ, ಸಂಜನಾ ಕ್ಷಮೆ ಕೇಳಿರೋದು ಅವರ ವೈಯಕ್ತಿಕ ವಿಚಾರ, ಅದರ ಬಗ್ಗೆ ಅವರನ್ನೇ ಕೇಳಬೇಕು. ನಾನು ಬೇರೆಯವರ ವೈಯಕ್ತಿಕ ವಿಚಾರವನ್ನು ಮಾತನಾಡೋದು ತಪ್ಪಾಗುತ್ತದೆ. ಬೇರೆ ಅವರಿಗೆ ಚಿತ್ರರಂಗದಲ್ಲಿ ಕಹಿ ಅನುಭವಗಳು ಆಗಿರಬಹುದು ಅದು ನನಗೆ ಗೊತ್ತಿಲ್ಲ. ಆದ್ರೆ ನನಗೆ ಈ ರೀತಿಯ ಯಾವುದೇ ಅನುಭವ ಆಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *