ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ಬಗ್ಗೆ ಇಂಚಿಂಚು ಮಾಹಿತಿಗಳು ಹೊರಬರುತ್ತಿದೆ. ಶುಭಾ ಪೂಂಜಾ ಅವರಿಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದರು ಎಂಬ ವಿಚಾರ ಜಾರ್ಜ್‌ಶೀಟ್‌ನಿಂದ ಬಯಲಾಗಿದೆ. ಆದರೆ ಈ ಸುದ್ದಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ನನ್ನ ಖಾತೆಗೆ ಯಾವುದೇ ಮೆಸೇಜ್‌ಗಳು ಬಂದಿಲ್ಲ ಎಂದು ಶುಭಾ ಪೂಂಜಾ (Shubha Poonja) ತಿಳಿಸಿದ್ದಾರೆ. ಇದನ್ನೂ ಓದಿ:’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್
ನನ್ನ ಎಲ್ಲಾ ಮಾಧ್ಯಮ ಮಿತ್ರರೇ ಬೆಳಗ್ಗೆಯಿಂದ ರೇಣುಕಾಸ್ವಾಮಿ ಪ್ರಕರಣದ ಕುರಿತು ನನಗೆ ಕರೆ ಮಾಡುತ್ತಿದ್ದೀರಾ, ಅದಕ್ಕೆಲ್ಲಾ ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ. ನನ್ನ ವೈಯಕ್ತಿಕ ಖಾತೆಯಲ್ಲಿ ಅಂತಹ ಯಾವುದೇ ಮೆಸೇಜ್‌ಗಳು ಬಂದಿಲ್ಲ ಎಂದು ನಟಿ ಕ್ಲ್ಯಾರಿಟಿ ನೀಡಿದ್ದಾರೆ.
ಅಂದಹಾಗೆ, ಕನ್ನಡದ ಹೆಸರಾಂತ ನಟಿಯರಾದ ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್ ನಿಂದ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ. ಪೊಲೀಸರ ವಿಚಾರಣೆ ವೇಳೆಯಲ್ಲಿ ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರದೋಶ್ ಮತ್ತು ವಿನಯ್ ನೀಡಿರುವ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಈ ನಟಿಯರಿಗೆ ಮಾತ್ರವಲ್ಲ, ಇನ್ನೂ ಹಲವು ನಟಿಯರಿಗೆ ಮೆಸೇಜ್ ಕಳುಹಿಸಿದ್ದ ಅನ್ನೋ ಮಾತು ಉಲ್ಲೇಖವಾಗಿದೆ. ರೇಣುಕಾಸ್ವಾಮಿ ಮೊಬೈಲ್ ನಲ್ಲಿ ನಾವು ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲ ಮಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ ಎಂದು ಪೊಲೀಸರಿಗೆ ಆರೋಪಿಗಳು ಹೇಳಿದ್ದಾರೆ. ಅವರ ಮಾತುಗಳನ್ನು ಚಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿದೆ.