90ರ ದಶಕದ ನಟ ನಟಿಯರ (Actress) ಮಕ್ಕಳು ಅನೇಕರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವರು ಎಂಟ್ರಿ ಕೊಡೋಕೆ ತಯಾರಿ ಮಾಡಿಕೊಳ್ತಿದ್ದಾರೆ.
ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಶೃತಿ ಮಗಳ ಸಿನಿಮಾ (Cinema) ಎಂಟ್ರಿಯ ಕುರಿತಾಗಿ ಸುದ್ದಿ ಕೇಳಿ ಬರ್ತಾ ಇತ್ತು. ಇದೀಗ ಆ ಸಮಯ ಹತ್ತಿರದಲ್ಲೇ ಇರುವ ಸೂಚನೆ ಕಂಡುಬರುತ್ತಿದೆ. ನಟಿ ಶೃತಿ ಮಗಳು ಗೌರಿ (Mahendar Gowri) ಮೇಕೋವರ್ ಮಾಡಿಕೊಂಡಿದ್ದು ಹೀರೋಯಿನ್ ಆಗಿ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಗೌರಿ-ಗಣೇಶ ಹಬ್ಬಕ್ಕೆ ಶೃತಿ ಮಗಳು ʻಗೌರಿ ಅಲಿಯಾಸ್ ಮಿಲಿʼ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಪುಟ್ಟ ಗಣೇಶನ ಹಿಡಿದು ಸಿಹಿ ಸುದ್ದಿ ಹಂಚಿಕೊಂಡ ಐಶ್ವರ್ಯ-ವಿನಯ್ ದಂಪತಿ
ಶೃತಿ ಮಗಳು ಗೌರಿ ಕೂಡ ತಾಯಿಯಂತೆ ಸರಳ, ಗಂಭೀರ ಉಡುಗೆಯಲ್ಲಿ ಸದಾ ಮಿಂಚುತ್ತಾರೆ. ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿದ್ದು ಹೊಸ ನಾಯಕಿಯಂತೆ ಕಂಗೊಳಿಸುತ್ತಿದ್ದಾರೆ. ಎಸ್.ಮಹೇಂದರ್ ಹಾಗೂ ಶೃತಿ ಪುತ್ರಿಯಾಗಿರುವ ಗೌರಿ ತಮ್ಮ ಸಿನಿಮಾ ಕುಟುಂಬದ ಪೀಳಿಗೆಯ ಮುಂದಿನ ನಟಿ. ಶೀಘ್ರದಲ್ಲೇ ಶೃತಿ ಮಗಳು ಗೌರಿ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ: ಖುಷಿಯಾಗಿ ಗಣೇಶ ಹಬ್ಬ ಆಚರಣೆ – ಡಿವೋರ್ಸ್ ವದಂತಿ ತಳ್ಳಿಹಾಕಿದ ನಟ ಗೋವಿಂದ ದಂಪತಿ