ಕೆಟ್ಟ ಚಟಗಳಿಂದ ಸಾವನ್ನಪ್ಪಿದ್ರಾ? ಪತಿ ಸಾವಿನ ಬಗ್ಗೆ ನಟಿ ಶ್ರುತಿ ಸ್ಪಷ್ಟನೆ

Public TV
2 Min Read
shruti shanmuga priya

ಮಿಳು ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯಾ (Shruti Shanmuga Priya) ಅವರ ಪತಿ ಅರವಿಂದ್ (Aravind) ಅವರು ಆಗಸ್ಟ್ 2ರಂದು ಹೃದಯಾಘಾತದಿಂದ (Heart Attack) ನಿಧನರಾದರು. 30ನೇ ವಯಸ್ಸಿಗೆ ಬಾಡಿ ಬಿಲ್ಡರ್ ನಿಧನ ಪತ್ನಿ ಶ್ರುತಿ ಮತ್ತು ಕುಟುಂಬಕ್ಕೆ ಶಾಕ್ ನೀಡಿತ್ತು. ಇದೀಗ ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಕೆಟ್ಟ ಚಟದಿಂದ ನಟಿಯ ಪತಿ ನಿಧನರಾದರು ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಬಗ್ಗೆ ಕಿರುತೆರೆ ನಟಿ ಶ್ರುತಿ ಸ್ಪಷ್ಟನೆ ನೀಡಿದ್ದಾರೆ. ಮೊದಲ ಬಾರಿಗೆ ಪತಿ ಸಾವಿನ ಬಗ್ಗೆ ಮೌನ ಮುರಿದಿದ್ದಾರೆ.

shruti shanmuga priya

ಉತ್ತಮ ಬಾಡಿ ಬಿಲ್ಡರ್ ಆಗಿದ್ದ ಅರವಿಂದ್ ಕೆಟ್ಟ ಚಟಗಳಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಈಗಾಗಲೇ ಪತಿಯ ಸಾವಿನ ದುಃಖದಲ್ಲಿರುವ ಶ್ರುತಿ ಮತ್ತು ಅರವಿಂದ್ ಕುಟುಂಬಸ್ಥರು ಈ ಸುದ್ದಿಗಳನ್ನ ಕೇಳಿ ಮತ್ತಷ್ಟು ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಪತಿಯ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ ಇಲಿಯಾನಾ

shruthi shanmuga priya 1

ಸದ್ಯ ನಾನು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದೇನೆ. ನನಗೆ ಸಾಂತ್ವನ ಹೇಳಲು ಅನೇಕರು ಕರೆ ಮಾಡಿದ್ದಾರೆ, ಸಂದೇಶ ಕಳುಹಿಸುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆ ಮತ್ತು ಧನ್ಯವಾದಗಳು. ಈ ಸಮಯದಲ್ಲಿ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳಿಗೆ ನನ್ನದೊಂದು ವಿನಂತಿ. ನನ್ನ ಪತಿ ಹೃದಯಾಘಾತದಿಂದ ನಿಧನರಾದರು. ಇದನ್ನು ವೈದ್ಯರು ಕೂಡ ದೃಢಪಡಿಸಿದ್ದಾರೆ. ಆದರೆ ಸತ್ಯಾಂಶ ತಿಳಿಯದೆ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನಾವೆಲ್ಲರೂ ಈಗ ದುಃಖದಲ್ಲಿದ್ದೇವೆ. ಇಂತಹ ಸಮಯದಲ್ಲಿ ನಿಮ್ಮ ಅಭಿಪ್ರಾಯ ಮತ್ತು ಇಷ್ಟಗಳಿಗಾಗಿ ನಮಗೆ ಈ ರೀತಿ ಕಿರುಕುಳ ನೀಡಬೇಡಿ ಎಂದು ಶ್ರುತಿ ವಿನಂತಿಸಿದ್ದಾರೆ.

ಹಲವು ವರ್ಷಗಳಿಂದ ನಟಿ ಶ್ರುತಿ- ಅರವಿಂದ್ ಪ್ರೀತಿಸುತ್ತಿದ್ದರು. ಕಳೆದ ವರ್ಷ ಮೇ 27ರಂದು ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಆಗಿ ಒಂದೇ ವರ್ಷಕ್ಕೆ ಪತಿ ನಿಧನವಾಗಿರೋದು ಶ್ರುತಿ ಮತ್ತು ಅವರ ಕುಟುಂಬಕ್ಕೆ ಶಾಕ್ ಕೊಟ್ಟಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article