‘ಸಲಾರ್’ (Salaar) ಬ್ಯೂಟಿ ಶ್ರುತಿ ಹಾಸನ್ (Shruti Haasan) ಅವರು ಸದ್ಯ ಕಾನ್ ಫೆಸ್ಟಿವಲ್‌ನಲ್ಲಿ (Cannes Festival 2023) ಪಾಲ್ಗೊಂಡಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:‘ಕೊರಗಜ್ಜ’ ಸಿನಿಮಾಗೆ ಬಾಲಿವುಡ್ ನಟ ಕಬೀರ್ ಬೇಡಿ ಕನ್ನಡದಲ್ಲಿ ಡಬ್ಬಿಂಗ್
ತೆಲುಗು- ತಮಿಳಿನ ಸೂಪರ್ ಸ್ಟಾರ್‌ಗಳಿಗೆ ನಾಯಕಿಯಾಗುವ ಮೂಲಕ ಶ್ರುತಿ ಹಾಸನ್ ಚಿತ್ರರಂಗದಲ್ಲಿ ಮೋಡಿ ಮಾಡ್ತಿದ್ದಾರೆ. ಸಾಲು ಸಾಲು ಬಂಪರ್ ಆಫರ್‌ಗಳು ಅವರ ಕೈಯಲ್ಲಿದೆ. ನಟಿ, ಗಾಯಕಿಯಾಗಿ ಕಮಲ್ ಪುತ್ರಿ ಗುರುತಿಸಿಕೊಂಡಿದ್ದಾರೆ.
View this post on Instagram
ಫ್ರಾನ್ಸ್‌ನಲ್ಲಿ ಕಾನ್ ಫೆಸ್ಟಿವಲ್ ಮೇ 16ರಿಂದ ಶುರುವಾಗಿ ಮೇ 27ರವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್, ಐಶ್ವರ್ಯ ರೈ, ಇಶಾ ದತ್ತ್, ಅದಿತಿ ರಾವ್ ಹೈದರಿ (Aditi Rao Hydari) ಸೇರಿದಂತೆ ಹಲವು ನಟಿಮಣಿಯರು ರೆಡಿ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
View this post on Instagram
ಇದೀಗ ಕಾನ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ, ಕಪ್ಪು ಬಣ್ಣದ ಹೂವಿನ ಡ್ರೆಸ್ ಧರಿಸಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಸಲಾರ್ ಸುಂದರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.