ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಇದೀಗ ಮತ್ತೊಂದು ಬಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಹಿಂದಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶ್ರದ್ಧಾ ಇದೀಗ ಮತ್ತೆ ಬಾಲಿವುಡ್ನತ್ತ ಮುಖ ಮಾಡಿದ್ದಾರೆ.
Advertisement
ಯೂ ಟರ್ನ್, ಆಪರೇಷನ್ ಅಲಮೇಲಮ್ಮ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಶ್ರದ್ಧಾ ಇದೀಗ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಬಾಲಿವುಡ್ನ `ಮಿಲನ್ ಟಾಕೀಸ್’ ಚಿತ್ರದಲ್ಲಿ ಶ್ರದ್ಧಾ ಈ ಹಿಂದೆ ನಟಿಸಿದ್ದರು. ಮಿಲಿಂದ್ ಧೈಮಡೆ ನಿರ್ದೇಶನದ `ಲೆಟರ್ಸ್ ಟು ಮಿಸ್ಟರ್ ಖನ್ನಾ’ ರಣ್ಬೀರ್ ಕಪೂರ್ ತಾಯಿ ನೀತು ಕಪೂರ್, ಸನ್ನಿ ಕೌಶಲ್ ಜೊತೆ ಶ್ರದ್ಧಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದ ವೇಳೆ ತೆಗೆದ ಫೋಟೋ ಸಖತ್ ವೈರಲ್ ಆಗುತ್ತಿದೆ.
Advertisement
Advertisement
ತಾಯಿ ಮತ್ತು ಮಗನ ಬಂಧ ಸಾರುವಂತಹ ಕಥೆಯಲ್ಲಿ ನೀತು ಕಪೂರ್ ಜೊತೆ ಶ್ರದ್ಧಾ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ. ಎಂದೂ ಕಾಣಿಸಿಕೊಂಡಿರದ ಡಿಫರೆಂಟ್ ರೋಲ್ನಲ್ಲಿ ಯೂ ಟರ್ನ್ ಬೆಡಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಲಯನ್ಸ್ಗೇಟ್ ಇಂಡಿಯಾ ಸ್ಟುಡಿಯೋ ಸಾಥ್ ನೀಡುತ್ತಿದೆ. ಇದನ್ನೂ ಓದಿ:ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್
Advertisement
ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಅಪ್ಡೇಟ್ ಅನ್ನ ಚಿತ್ರತಂಡ ಕೊಡಲಿದೆ.