ಹೊಸ ಹೇರ್ ಸ್ಟೈಲಿನಲ್ಲಿ ‘ಆಶಿಕಿ 2’ ನಟಿ- ಕಲ್ಪನಾ ಚಾವ್ಲಾ ಬಯೋಪಿಕ್‌ನಲ್ಲಿ ಶ್ರದ್ಧಾ ಕಪೂರ್?

Public TV
1 Min Read
shradha kapoor

‘ಆಶಿಕಿ 2′ (Ashiqui 2) ಬ್ಯೂಟಿ ಶ್ರದ್ಧಾ ಕಪೂರ್ (Shradha Kapoor) ಅವರು ಸದ್ಯ ತಮ್ಮ ಹೊಸ ಹೇರ್ ಸ್ಟೈಲಿನಲ್ಲಿ ಲುಕ್‌ನಿಂದ ಸದ್ದು ಮಾಡ್ತಿದ್ದಾರೆ. ಸಡನ್ ಆಗಿ ನಟಿ ತಮ್ಮ ಕೂದಲಿಗೆ ಕತ್ತರಿ ಹಾಕಿದ್ಯಾಕೆ ಎಂದು ಅಭಿಮಾನಿಗಳ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಗಗನಯಾತ್ರಿ ಕಲ್ಪನಾ ಚಾವ್ಲಾ (Kalpana Chawla) ಬಯೋಪಿಕ್ ಮಾಡಲು ಶ್ರದ್ಧಾ ಕಪೂರ್ ತೆರೆಮರೆಯಲ್ಲಿ ತಯಾರಿ ಮಾಡ್ತುದ್ದಾರೆ ಎಂದು ಹೇಳಲಾಗುತ್ತಿದೆ.

SHRADHA KAPOOR

ಬಾಲಿವುಡ್ ನಟ ಶಕ್ತಿ ಕಪೂರ್ (Shakti Kapoor) ಮಗಳು ಶ್ರದ್ಧಾ ಕಪೂರ್ ಸದಾ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಶ್ರದ್ಧಾ ಕಪೂರ್ ಸಿನಿಮಾ ಅಂದಾಕ್ಷಣ ನೆನಪಾಗೋದೇ ಆಶಿಕಿ 2 ಚಿತ್ರ. ಆದಿತ್ಯ ರಾಯ್ ಕಪೂರ್‌ಗೆ ಜೋಡಿಯಾಗಿ ಶ್ರದ್ಧಾ ಪಡ್ಡೆಹುಡುಗರ ದಿಲ್ ಕದ್ದಿದ್ದರು. ಇದನ್ನೂ ಓದಿ:ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದ ಅಭಿಷೇಕ್

ಇದೀಗ ಕೂದಲಿಗೆ ಕತ್ತರಿ ಹಾಕಿ ನಟಿ ಹೊಸ ಹೇರ್ ಸ್ಟೈಲಿನಿಂದ (Hair Style) ಮಿಂಚ್ತಿದ್ದಾರೆ. ಅದ್ಯಾಕೆ ಸಡನ್ ಆಗಿ ನಟಿ ಹೊಸ ಅವತಾರ ತಾಳಿದರು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಕಲ್ಪನಾ ಚಾವ್ಲಾ ಅವರ ಜೀವನದ ಸಾಧನೆಯನ್ನ ತೆರೆಯ ಮೇಲೆ ತೋರೋದ್ದಕ್ಕೆ ಸಿದ್ಧತೆ ನಡೆಯುತ್ತಿದೆ. ಕಲ್ಪನಾ ಪಾತ್ರಕ್ಕೆ ಜೀವ ತುಂಬಲು ಶ್ರದ್ಧಾ ಕಪೂರ್ ಸಿದ್ಧವಾಗ್ತಿದ್ದಾರೆ ಎನ್ನಲಾಗುತ್ತಿದೆ.

shradha kapoor 1

ಅದಕ್ಕಾಗಿಯೇ ಶ್ರದ್ಧಾ ಕಪೂರ್, ಕಲ್ಪನಾ ಅವರಂತೆಯೇ ಹೇರ್ ಸ್ಟೇಲ್ ಮಾಡಿದ್ದಾರೆ. ಅವರ ಬಯೋಪಿಕ್‌ನಲ್ಲಿ ನಟಿಸಲು ಪೂರ್ವ ತಯಾರಿ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ನಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಅಷ್ಟಕ್ಕೂ ಈ ಸುದ್ದಿ ಅದೆಷ್ಟು ನಿಜಾ ಎಂಬುದನ್ನ ತಿಳಿದುಕೊಳ್ಳಲು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

Share This Article