ಶ್ರದ್ಧಾ ಕಪೂರ್ ಕೊರಳಲ್ಲಿ R ಪೆಂಡೆಂಟ್- ಬಾಯ್‌ಫ್ರೆಂಡ್ ಬಗ್ಗೆ ಗುಟ್ಟು ರಟ್ಟು

Public TV
1 Min Read
shradha kapoor 1 1

ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ಸಿನಿಮಾಗಿಂತ ಖಾಸಗಿ ವಿಚಾರವಾಗಿ ಹೆಚ್ಚುಚ್ಚು ಸುದ್ದಿಯಾಗುತ್ತಿದ್ದಾರೆ. ಸದ್ಯ ತಮ್ಮ ಬಾಯ್‌ಫ್ರೆಂಡ್ ಯಾರು? ಎಂಬುದರ ಬಗ್ಗೆ ನಟಿ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಕಾಲಿಟ್ಟ ‘ಬೆಳ್ಳುಳ್ಳಿ ಕಬಾಬ್’ ಚಂದ್ರು

Shraddha Kapoor

ಶ್ರದ್ಧಾ ಕಪೂರ್ ಅವರು ಇತ್ತೀಚೆಗೆ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದರು. ಆ ಫೋಟೋದಲ್ಲಿ R ಎಂಬ ಪೆಂಡೆಂಟ್ ಸರವನ್ನು ನಟಿ ಧರಿಸಿದ್ದರು. ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಆರ್ ಅಂದರೆ ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಚರ್ಚೆಗೆ ಶುರುವಾಗಿದೆ.

shradha kapoor

R ಎಂದರೆ ಯಾರು ಎಂದು ನೆಟ್ಟಿಗರು ಶ್ರದ್ಧಾಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಆರ್ ಅಂದರೆ ರಾಹುಲ್ ಮೋದಿ ಅಲ್ವಾ? ಎಂದು ಕೇಳಿದ್ದಾರೆ. ಆದರೆ ಹರಿದು ಬರುತ್ತಿರೋ ಪ್ರಶ್ನೆಗೆ ನಟಿ ಮೌನ ವಹಿಸಿದ್ದಾರೆ. ಇದನ್ನೂ ಓದಿ:Kalki 2898 AD: ಪ್ರಭಾಸ್ ಸಿನಿಮಾದಲ್ಲಿ ಹೇಗಿರಲಿದೆ ಕಮಲ್ ಹಾಸನ್ ಪಾತ್ರ?

‘ಆಶಿಕಿ 2’ ಬೆಡಗಿ ಶ್ರದ್ಧಾ ಕಪೂರ್ (Shradha Kapoor) ಸದ್ಯ ರಾಹುಲ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ಅಂಬಾನಿ ಕುಟುಂಬದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅಂತೆ, ಕಂತೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತೆ ಆಗಿತ್ತು.

ಬಾಲಿವುಡ್‌ನಲ್ಲಿ ಇತ್ತೀಚೆಗೆ ಸಾಕಷ್ಟು ಸ್ಟಾರ್ ಜೋಡಿಗಳು ಹಸೆಮಣೆ ಏರಿದ್ದಾರೆ. ರಕುಲ್-ಜಾಕಿ, ಕೃತಿ-ಪುಲ್ಕಿತ್ ಸಾಮ್ರಾಟ್ ಸೇರಿದಂತೆ ಅನೇಕರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮುಂದಿನ ಮದುವೆ ಗುಡ್ ನ್ಯೂಸ್ ಶ್ರದ್ಧಾ ಅವರದ್ದೇ ಅಂತ ಫ್ಯಾನ್ಸ್ ನಟಿಯ ಕಡೆಯ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಹಾಗಾದ್ರೆ ಸದ್ಯದಲ್ಲೇ ಮದುವೆ ಬಗ್ಗೆ ಸಿಹಿಸುದ್ದಿ ಕೊಡುತ್ತಾರಾ ಕಾಯಬೇಕಿದೆ.

Share This Article