ಬಾಲಿವುಡ್‌ನ ಬ್ಯುಸಿ ನಟಿ ಶ್ರದ್ಧಾ ಕಪೂರ್ (Shradha Kapoor) ಅವರ ಮನೆಗೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ದಸರಾ ಹಬ್ಬದ (Dasara) ಶುಭಸಂದರ್ಭದಲ್ಲಿ ನಟಿ, ಲ್ಯಾಂಬೊರ್ಗೀನಿ (Lamborghini) ಕಾರು ಖರೀದಿಸಿದ್ದಾರೆ. ಹೊಸ ಕಾರಿನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ದಸರಾ ಹಬ್ಬದ ಹಿನ್ನೆಲೆ ದುಬಾರಿ ಕಾರು ಖರೀದಿಸಿದ್ದಾರೆ. 4 ಕೋಟಿ ರೂ. ಬೆಲೆ ಬಾಳುವ ಕೆಂಪು ಬಣ್ಣದ ಲ್ಯಾಂಬೊರ್ಗೀನಿ ಕಾರು ಕೊಂಡಿದ್ದಾರೆ. ನಟಿ ಕಾರ್ ಡ್ರೈವ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Shraddha Kapoor with her new lamborghini#ShraddhaKapoor pic.twitter.com/EGhI17x94T
— ً (@shraddhaposts) October 24, 2023
ಖಳನಟನಾಗಿ ಗಮನ ಸೆಳೆದಿರುವ ಶಕ್ತಿ ಕಪೂರ್ ಅವರ ಮಗಳು ಶ್ರದ್ಧಾ ಕಪೂರ್ ಕೂಡ ಬಾಲಿವುಡ್‌ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ದುಬಾರಿ ಕಾರಿನ ಸುದ್ದಿಯಲ್ಲಿರುವ ಶ್ರದ್ಧಾ ಕಪೂರ್‌ಗೆ ಮದುವೆ ಯಾವಾಗ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ರೆಡಿಯಾಗ್ತಿದ್ದಾರೆ `ಕೆಂಡ’ ಕಲಾವಿದರು
ರಣ್‌ಬೀರ್-ಶ್ರದ್ಧಾ ನಟನೆಯ ‘ತೂ ಜೂತಿ ಮೇ ಮಕ್ಕರ್’ ಅನ್ನೋ ಈ ವರ್ಷ ತೆರೆಕಂಡಿತ್ತು. ‘ಸ್ತ್ರಿ’ ಪಾರ್ಟ್ 2ಗೆ ಶ್ರದ್ಧಾ ಕಪೂರ್ ಹೀರೋಯಿನ್ ಆಗಿದ್ದಾರೆ.