ರಾಹುಲ್‍ ಮೋದಿ ಜೊತೆ ನಟಿ ಶ್ರದ್ಧಾ ಬ್ರೇಕಪ್

Public TV
1 Min Read
shraddha kapoor

ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ (Shraddha Kapoor) ತಮ್ಮ ಸಿನಿಮಾಗಿಂತ ಖಾಸಗಿ ವಿಚಾರವಾಗಿ ಹೆಚ್ಚುಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಯ್ ಫ್ರೆಂಡ್ ಬಗ್ಗೆ ಇನ್ ಡೈರೆಕ್ಟ್ ಆಗಿ ಬಾಯ್ಬಿಟ್ಟಿದ್ದ ಶ್ರದ್ಧಾ, ಈಗ ಬ್ರೇಕ್ ಅಪ್ (Break up) ಮಾಡಿಕೊಂಡಿದ್ದಾರೆ ಎಂದು ಬಿಟೌನ್ ಮಾತಾಡ್ತಿದೆ. ಬಾಯ್ ಫ್ರೆಂಡ್ ರಾಹುಲ್ ಮೋದಿ ( Rahul Mody) ಜೊತೆ ಈ ನಟಿ ಟೂ ಬಿಚ್ಚಿದ್ದಾರಂತೆ.

shraddha kapoor

ಇತ್ತೀಚೆಗಷ್ಟೇ ತಮ್ಮ ಬಾಯ್‌ಫ್ರೆಂಡ್ ಯಾರು? ಎಂಬುದರ ಬಗ್ಗೆ ನಟಿ ಸುಳಿವು ಬಿಟ್ಟು ಕೊಟ್ಟಿದ್ದರು. ಶ್ರದ್ಧಾ ಕಪೂರ್ ಇತ್ತೀಚೆಗೆ ಹೊಸ ಫೋಟೋವೊಂದನ್ನು ಶೇರ್ ಮಾಡಿದ್ದರು. ಆ ಫೋಟೋದಲ್ಲಿ R ಎಂಬ ಪೆಂಡೆಂಟ್ ಸರವನ್ನು ನಟಿ ಧರಿಸಿದ್ದರು. ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಆರ್ ಅಂದರೆ ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಚರ್ಚೆ ಶುರುವಾಗಿತ್ತು.

Shraddha Kapoor

R ಎಂದರೆ ಯಾರು ಎಂದು ನೆಟ್ಟಿಗರು ಶ್ರದ್ಧಾಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಆರ್ ಅಂದರೆ ರಾಹುಲ್ ಮೋದಿ ಅಲ್ವಾ? ಎಂದು ಕೇಳಿದ್ದರು. ಹರಿದು ಬಂದಿದ್ದ ಪ್ರಶ್ನೆಗಳಿಗೆ  ನಟಿಯ ಮೌನವೇ ಉತ್ತರವಾಗಿತ್ತು.

 

‘ಆಶಿಕಿ 2’ ಬೆಡಗಿ ಶ್ರದ್ಧಾ ಕಪೂರ್  ಗಪ್ ಚುಪ್ ಆಗಿ ರಾಹುಲ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಅದಕ್ಕೆ ಪೂರಕವೆಂಬಂತೆ ಅಂಬಾನಿ ಕುಟುಂಬದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಅಂತೆ, ಕಂತೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತೆ ಆಗಿತ್ತು. ಈಗ ಬ್ರೇಕಪ್ ಸುದ್ದಿ ಕೇಳಿ ಬಂದಿದೆ.

Share This Article