ಬಾಲಿವುಡ್ (Bollywood) ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಇಡಿ ಶಾಕ್ ಬೆನ್ನಲ್ಲೇ ದೈವದ ಮೊರೆ ಹೋಗಿದ್ದಾರೆ. ದೈವ ಕೋಲದಲ್ಲಿ ಭಾಗಿಯಾಗಿ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೈವ ಕೋಲದ (Daiva Kola) ವಿಡಿಯೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ತೆಲುಗಿನ ಹೊಸ ಸಿನಿಮಾ ಒಪ್ಪಿಕೊಂಡ ಪೂಜಾ ಹೆಗ್ಡೆ
ತುಳುನಾಡಿನ ಹೆಣ್ಣು. ನನ್ನ ಮೂಲ ಊರಿಗೆ ಬಂದಿದ್ದೇನೆ. ನನ್ನ ಮಕ್ಕಳಿಗೆ ನನ್ನ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದೇನೆ. ಮಂಗಳೂರಿನಲ್ಲಿ ನಾಗಮಂಡಲ ಹಾಗೂ ಕೊಡಮಣಿತ್ತಾಯ ದೈವ ಕೋಲವನ್ನು ವೀಕ್ಷಣೆ ಮಾಡಿದ್ದೇವೆ. ಇದನ್ನು ಮಕ್ಕಳು ನೋಡಿ ಅಚ್ಚರಿಪಟ್ಟರು. ಭಕ್ತಿಯಿಂದ ಅನುಸರಿಸುವ ಶಕ್ತಿ ಮತ್ತು ನಂಬಿಕೆಯನ್ನು ಯಾವಾಗಲೂ ನನ್ನ ಆಕರ್ಷಿಸುತ್ತದೆ ಎಂದು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬೆಟ್ಟಿಂಗ್ ಪ್ರಕರಣ ಕುರಿತಂತೆ ನಟ ಸಾಹಿಲ್ ಖಾನ್ ಬಂಧನ
ಇತ್ತೀಚೆಗೆ ತಮ್ಮ ತಾಯಿ ಸುನಂದಾ ಮತ್ತು ಮಕ್ಕಳ ಜೊತೆ ದೈವ ಕೋಲ ವೀಕ್ಷಿಸಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಕೆಲ ಕಾಲ ಸಮಯ ಕಳೆದಿದ್ದಾರೆ. ದೈವ ಕೋಲದ ವಿಡಿಯೋ ಶೇರ್ ಮಾಡಿ ಈ ಬಗ್ಗೆ ನಟಿ ವಿವರಿಸಿದ್ದಾರೆ.
View this post on Instagram
2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದಿ ಅಡಿ ಜಾರಿ ನಿರ್ದೇಶನಾಲಯ ಪ್ರಕರಣವನ್ನು ದಾಖಲಿಸಿದ್ದು, ಜಾರಿ ನಿರ್ದೇಶನಾಲಯವು 97.97 ಕೋಟಿ ರೂಪಾಯಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದೆ. ಜಪ್ತಿಯಾದ ಆಸ್ತಿಗಳಲ್ಲಿ ಪುಣೆಯಲ್ಲಿರುವ ಬಂಗ್ಲೆ, ಫ್ಲಾಟ್ ಹಾಗೂ ಇಕ್ವಿಟಿ ಷೇರು ಕೂಡ ಹೊಂದಿವೆ.
ಈ ಹಿಂದೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಸಂಸ್ಥೆಯ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಸ್ಥೆಯ ಮೂಲಕ ಅಮಿತ್ ಭಾರದ್ವಾಜ್, ವಿವೇಕ್, ಅಜಯ್, ಮಹೇಂದರ್ ಹೀಗೆ ಹಲವಾರು ಏಜೆಂಟರ್ ಗಳು ಬಿಟ್ ಕಾಯಿನ್ ರೂಪದಲ್ಲಿ 2017ರಲ್ಲಿ 6,600 ಕೋಟಿ ರೂ. ಹಣ ಸಂಗ್ರಹಿಸಿದ್ದರು. ಇವರ ಜೊತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವ್ಯವಹಾರ ಮಾಡಿದ್ದರು ಎನ್ನುವ ಆರೋಪವಿದೆ.
ಉಕ್ರೇನ್‌ನಲ್ಲಿ ಬಿಟ್ ಕಾಯಿನ್ ಮೈನಿಂಗ್ ಫಾರ್ಮ್ ಶುರು ಮಾಡುವುದಕ್ಕೆ ಶಿಲ್ಪಾ ಮತ್ತು ರಾಜ್ ಕುಂದ್ರಾ ದಂಪತಿ ಅಮಿತ್ ಭಾರದ್ವಾಜ್ ಬಳಿ 285 ಬಿಟ್ ಕಾಯಿನ್ ಪಡೆದಿದ್ದಾರೆ. ಸದ್ಯ ಈ ಬಿಟ್ ಕಾಯಿನ್ ಮೌಲ್ಯ ಸುಮಾರು 150 ಕೋಟಿ ರೂ. ಎಂದು ಎಂದು ತನಿಖಾ ಸಂಸ್ಥೆ ಹೇಳಿದೆ.