ಕುಟುಂಬದ ಜೊತೆ ಕೇದಾರನಾಥಕ್ಕೆ ಶಿಲ್ಪಾ ಶೆಟ್ಟಿ ಭೇಟಿ

Public TV
1 Min Read
shilpa shetty

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ತಮ್ಮ ತಾಯಿ ಮತ್ತು ಸಹೋದರಿ ಶಮಿತಾ ಜೊತೆ ಕೇದಾರನಾಥಕ್ಕೆ (Kedaranath Temple) ಭೇಟಿ ನೀಡಿದ್ದಾರೆ. ಈ ಮೂಲಕ ತಾಯಂದಿರ ದಿನವನ್ನು ನಟಿ ವಿಶೇಷವಾಗಿ ಆಚರಿಸಿದ್ದಾರೆ.

shilpa shetty 1 2ಇತ್ತೀಚೆಗೆ ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಕೇದಾರನಾಥಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಮ್ಮ ಮತ್ತು ಸಹೋದರಿ ಜೊತೆ ದೇವರ ಸನ್ನಿಧಿಯಲ್ಲಿ ನಟಿ ಕಾಲ ಕಳೆದಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ವಿಜಯ್ ದೇವರಕೊಂಡ

ಇದೀಗ ಹಲವು ವರ್ಷಗಳ ನಂತರ ‘ಕೆಡಿ’ (KD Film) ಸಿನಿಮಾದ ಮೂಲಕ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಕುಡ್ಲದ ಬೆಡಗಿ ಕಾಣಿಸಿಕೊಳ್ತಿದ್ದಾರೆ.

ಈ ಹಿಂದೆ ಆಟೋ ಶಂಕರ್, ಪ್ರೀತ್ಸೋದ್ ತಪ್ಪಾ?, ಒಂದಾಗೋಣ ಬಾ ಸಿನಿಮಾಗಳಲ್ಲಿ ನಾಯಕಿಯಾಗಿ ಶಿಲ್ಪಾ ಶೆಟ್ಟಿ ನಟಿಸಿದ್ದರು.

Share This Article