ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರು ಸದಾ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇದೀಗ 13 ವರ್ಷಗಳ ನಂತರ ಬೆಳ್ಳಿತೆರೆಗೆ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಈ ನಡುವೆ ಅವರು ಬರೋಬ್ಬರಿ 10 ಕೋಟಿ ರೂ. ಆಫರ್‌ವೊಂದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ಶಿಲ್ಪಾ ಶೆಟ್ಟಿಗೆ ಅವರನ್ನು ಆಯುರ್ವೇದಿಕ್ ಕಂಪನಿಯೊಂದು ಸ್ಲಿಮ್ಮಿಂಗ್ ಮಾತ್ರೆ (ಸ್ಲಿಮ್ ಆಗಲು ಮಾತ್ರೆ) ಬಗ್ಗೆ ಜಾಹೀರಾತು ಮಾಡುವಂತೆ ಸಂಪರ್ಕಿಸಿತ್ತು. ಜೊತೆಗೆ ಇದಕ್ಕಾಗಿ ಅವರಿಗೆ 10 ಕೋಟಿ ಆಫರ್ ನೀಡಿತ್ತು. ಆದರೆ ಈ ಅವಕಾಶವನ್ನ ಶಿಲ್ಪಾ ಶೆಟ್ಟಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಸಂದರ್ಶನವೊಂದಲ್ಲಿ ಮಾತನಾಡಿದ್ದಾರೆ.
“ಸ್ಲಿಮ್ ಮಾತ್ರೆ ಬಗ್ಗೆ ಜಾಹೀರಾತು ನೀಡುವಂತೆ ಕಂಪನಿಯೊಂದು ನನ್ನನ್ನು ಸಂಪರ್ಕಿಸಿತ್ತು. ನಾನು ನೈಸರ್ಗಿಕ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಹೀಗಾಗಿ ವೈಜ್ಞಾನಿಕವಾಗಿ ಕೆಲವನ್ನ ಪ್ರೋತ್ಸಾಹಿಸುವುದಿಲ್ಲ. ಆರೋಗ್ಯಕರ ಆಹಾರ ಮತ್ತು ವ್ಯಾಯಮದಿಂದ ಸೌಂದರ್ಯ ಸಾಧ್ಯ. ಆದರೆ ನನಗೆ ನಂಬಿಕೆ, ಭರವಸೆ ಇಲ್ಲದ ವಿಚಾರದ ಬಗ್ಗೆ ನಾನು ಪ್ರಚಾರ ಮಾಡುವುದು ಸರಿಯಿರಲ್ಲ” ಎಂದು ಶಿಲ್ಪಾ ಶೆಟ್ಟಿ ಅವರು ರಿಜೆಕ್ಟ್ ಮಾಡಿದ್ದಾರೆ.
ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು ಕೂಡ 2 ಕೋಟಿಯ ಫೇಸ್ ಕ್ರೀಮ್ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು. ಶಿಲ್ಪಾ ಶೆಟ್ಟಿ ಅವರು 2007ರ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ‘ನಿಕಮ್ಮಾ’ ಸಿನಿಮಾದ ಮೂಲಕ ಮತ್ತೆ ತಮ್ಮ ಸಿನಿ ಪಯಣವನ್ನು ಮುಂದುವರಿಸುತ್ತಿದ್ದಾರೆ.