BollywoodCinemaLatestMain PostSouth cinema

ಶೂಟಿಂಗ್ ವೇಳೆ ಶಿಲ್ಪಾ ಶೆಟ್ಟಿ ಕಾಲಿಗೆ ಗಂಭೀರ ಪೆಟ್ಟು

ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸ್ಟಂಟ್ಸ್ ಮಾಡುವ ವೇಳೆ ಈ ಅವಘಡ ನಡೆದಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿಗೆ ಇಂದಿಗೂ ಬೇಡಿಕೆ ಇದೆ. ಮದುವೆ ಆಗಿ, ಮಕ್ಕಳಾಗಿದ್ದರು ಕೂಡ ಇಂದಿಗೂ ಅವರ ಚಾರ್ಮ್ ಕಳೆದುಕೊಂಡಿಲ್ಲ. ಕುಟುಂಬದ ಜತೆ ಸಿನಿಮಾ, ರಿಯಾಲಿಟಿ ಶೋ ಕೂಡ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಈಗ ತಮ್ಮ ಹೊಸ ಪ್ರಾಜೆಕ್ಟ್ `ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸಿರೀಸ್‌ನ ಚಿತ್ರೀಕರಣದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರ ಕಾಲಿಗೆ ಪೆಟ್ಟಾಗಿದ್ದು, ಸೂಕ್ತ ಚಿಕಿತ್ಸೆ ಕೂಡ ಪಡೆದಿದ್ದಾರೆ. ಈ ಕುರಿತು ಸ್ವತಃ ನಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಹಾಸ್ಯನಟ ರಾಜು ಶ್ರೀವಾಸ್ತವ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ನಿರ್ದೇಶಕರು ರೋಲ್, ಕ್ಯಾಮೆರಾ, ಆ್ಯಕ್ಷನ್ ಎಂದರು. ನನ್ನ ಕಾಲು ಮುರಿಯಿತು. ಆರು ವಾರ ವಿಶ್ರಾಂತಿ ಪಡೆಯುತ್ತಿದ್ದೇನೆ. ನಂತರ ಮತ್ತೆ ಶೂಟಿಂಗ್‌ಗೆ ಹೋಗುತ್ತೇನೆ ಎಂದು ಶಿಲ್ಪಾ ಶೆಟ್ಟಿ ಅಡಿಬರಹ ನೀಡಿದ್ದಾರೆ. ಒಟ್ನಲ್ಲಿ ನೆಚ್ಚಿನ ನಟಿ ಆದಷ್ಟು ಬೇಗ ಗುಣಮುಖರಾಗಲಿ ಎಂಬುದು ಅಭಿಮಾನಿಗಳ ಆಶಯ.

Live Tv

Leave a Reply

Your email address will not be published.

Back to top button