ಹಿಂದೂಗಳ ಮಹಾದಾಸೆಯಾಗಿದ್ದ ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಕರಾವಳಿ ನಟಿ ಶಿಲ್ಪಾ ಶೆಟ್ಟಿ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಾರಾ? ಯಶ್ ಸ್ಪಷ್ಟನೆ
Advertisement
ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಪತ್ರ ಬರೆದಿದ್ದು, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ರಾಮಮಂದಿರ ನಿರ್ಮಿಸಿ ಪ್ರಧಾನಿ ಮೋದಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಭವ್ಯ ಮಂದಿರ ನಿರ್ಮಿಸಿದ ಪ್ರಧಾನಿ ಮೋದಿ ಅವರು ಯಾವಾಗಲೂ ದೇವಾಲಯದ ಜೊತೆ ಸಂಬಂಧ ಹೊಂದಿರುತ್ತಾರೆ. ಅವರ ಮಹತ್ವದ ಕಾರ್ಯಕ್ಕೆ ಧನ್ಯವಾದ ಅರ್ಪಿಸುತ್ತೇನೆಂದು ಬರೆದಿದ್ದಾರೆ.
Advertisement
सुप्रसिध्द अभिनेत्री @TheShilpaShetty जी यांनी नुकताच पंतप्रधान नरेंद्र मोदीजींना पत्र लिहून त्यांचे आभार मानले.
५ शतकांपासून श्रीरामांना वनवास घडत होता. अखेर तो वनवास संपला. तेही मोदीजींच्या प्रयत्नांमुळे.. यासाठीच शिल्पाजींनी पंतप्रधानांचे आभार मानले आहेत.… pic.twitter.com/LTqpjGolLK
— भाजपा महाराष्ट्र (@BJP4Maharashtra) February 12, 2024
Advertisement
ಹಿಂದೂಗಳ 500 ವರ್ಷಗಳ ಹೋರಾಟಕ್ಕೆ ಬಾಲರಾಮನ ಪ್ರತಿಷ್ಠಾಪನೆಯಿಂದ ಜಯ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಾಲರಾಮನ ವಿಗ್ರಹ ಅನಾವರಣಗೊಳಿಸಲಾಯಿತು. ಭವ್ಯ ಮಂದಿರದಲ್ಲಿ ಬಾಲರಾಮ ನೆಲೆಸಿದನು. ಇಡೀ ಭಾರತವೇ ಅಂದು ಹಬ್ಬ ಆಚರಿಸಿತು ಅಂತ ಶಿಲ್ಪಾ ಶೆಟ್ಟಿ ಬರೆದಿದ್ದಾರೆ. ಕೆಲವರು ಇತಿಹಾಸ ಓದುತ್ತಾರೆ, ಇನ್ನೂ ಕೆಲವರು ಅದರಿಂದ ಕಲಿಯುತ್ತಾರೆ. ಆದರೆ ನಿಮ್ಮಂತಹ ವ್ಯಕ್ತಿಗಳು ಇತಿಹಾಸವನ್ನು ಮರು ಸೃಷ್ಟಿಸುವ ಅಸಾಧಾರಣ ಸಾಮರ್ಥ್ಯ ಹೊಂದಿರುತ್ತಾರೆ. 500 ವರ್ಷಗಳ ರಾಮಜನ್ಮಭೂಮಿಯ ಇತಿಹಾಸವನ್ನು ಪುನಃ ಸೃಷ್ಟಿಸಿದ್ದೀರಿ ನಟಿ ಹೊಗಳಿದ್ದಾರೆ. ಸದ್ಯ ನಟಿಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
Advertisement
ಇಂತಹ ಮಂಗಳಕರ ಸಾಧನೆ ಮಾಡಿದಕ್ಕೆ ನಿಮ್ಮ ಹೆಸರು ಭಗವಾನ್ ಶ್ರೀರಾಮನೊಂದಿಗೆ ಶಾಶ್ವತವಾಗಿ ಇರುತ್ತದೆ ಎಂದು ಶಿಲ್ಪಾ ಶೆಟ್ಟಿ ಹಿಂದಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.