
ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಬಸ್ ನಲ್ಲಿ ಪ್ರಯಾಣ ಮಾಡುತ್ತಾರಾ? ಮೊದಲು ಹೀಗೊಂದು ಪ್ರಶ್ನೆ ಶುರುವಾಗಿತ್ತು. ಐಷಾರಾಮಿ ಕಾರುಗಳನ್ನು ಹೊಂದಿರುವ ಮತ್ತು ಖಾಸಗಿ ವಿಮಾನದಲ್ಲೂ ಓಡಾಡುವ ಬಾಲಿವುಡ್ ಬೆಡಗಿ ಸೋಮವಾರ ಬಾಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಹಾಗಂತ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ವಿಡಿಯೋ ಹಾಕಿದ್ದಾರೆ. ಇದನ್ನೂ ಓದಿ : ರವಿವರ್ಮನ ಕಲ್ಪನೆಯ ಸುಂದರಿಯರಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿದ ಜನಾರ್ದನ ರೆಡ್ಡಿ
ಸೋಮವಾರ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶಿಲ್ಪಾ ಶೆಟ್ಟಿಗೆ ಇದ್ದಕ್ಕಿದ್ದಂತೆಯೇ ಆರೋಗ್ಯದ ಮೇಲೆ ಕಾಳಜಿ ಬಂದು ಬಿಟ್ಟಿದೆ. ಹೀಗಾಗಿ ಬಸ್ ನಲ್ಲೇ ವರ್ಕೌಟ್ ಶುರು ಮಾಡಿದ್ದಾರೆ. ಬಸ್ ಖಾಲಿಯೇ ಇದ್ದದ್ದರಿಂದ ಪುಲ್ ಅಪ್ಸ್, ಪುಶ್ ಅಪ್ಸ್ ಮಾಡಿದ್ದಾರೆ. ಆ ವಿಡಿಯೋವನ್ನು ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಆರೋಗ್ಯದ ಬಗ್ಗೆ ಸಖತ್ ಕಾಳಜಿ ಶಿಲ್ಪಾ ಶೆಟ್ಟಿ ಅವರಿಗೆ. ಯೋಗ ಅವರ ನೆಚ್ಚಿನ ಕಸರತ್ತು. ಅಲ್ಲದೇ ಜಿಮ್ ನಲ್ಲೂ ಅವರು ಹಲವು ಹೊತ್ತು ಕಳೆಯುತ್ತಾರಂತೆ. ಈ ವಯಸ್ಸಿನಲ್ಲೂ ಬಳಕುವ ಬಳ್ಳಿಯಂತಿರಲು ಅವರ ಯೋಗ ಮತ್ತು ಜಿಮ್ ಕಾರಣವಂತೆ. ಹಾಗಾಗಿ ಸಮಯ ಸಿಕ್ಕಾಗೆಲ್ಲ ಈ ರೀತಿಯಲ್ಲಿ ಅವರು ವರ್ಕೌಟ್ ಮಾಡುತ್ತಲೇ ಇರುತ್ತಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
ಶಿಲ್ಪಾ ಶೆಟ್ಟಿ ಆರೋಗ್ಯದ ಕುರಿತಂತೆ ಈಗಾಗಲೇ ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಆಗಾಗ್ಗೆ ಡಯಲ್, ಯೋಗ ಮತ್ತು ಸರಳವಾಗಿ ವ್ಯಾಯಾಮ ಮಾಡುವ ಕುರಿತು ವಿಡಿಯೋಗಳನ್ನು ಅಭಿಮಾನಿಗಳಿಗಾಗಿ ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹಲವು ರೀತಿಯಲ್ಲಿ ಟಿಪ್ಸ್ ಕೊಡುತ್ತಾರೆ.