ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಮತ್ತೆ ದರ್ಶನ್ ಜೊತೆ ತೆರೆಹಂಚಿಕೊಳ್ತಿದ್ದಾರೆ. ‘ಡೆವಿಲ್’ ಸಿನಿಮಾದಲ್ಲಿ ಅವರು ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ‘ಡೆವಿಲ್’ (Devil Film) ಸಿನಿಮಾದಲ್ಲಿ ಪಾತ್ರ ಹೇಗಿರಲಿದೆ? ಎಂಬುದರ ಬಗ್ಗೆ ನಟಿ ವಿವರಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ
ನಿನ್ನೆ (ಮಾ.16) ‘ಅಪ್ಪು’ ಸಿನಿಮಾ ನೋಡಲು ವೀರೇಶ್ ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ ‘ದಿ ಡೆವಿಲ್’ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಹೌದು ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಏಪ್ರಿಲ್‌ನಲ್ಲಿ ರಾಜಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ನನ್ನ ಪಾತ್ರದ ಶೂಟಿಂಗ್ 20% ಆಗಿದೆ. ಇನ್ನೂ 80% ಬಾಕಿ ಉಳಿದಿದೆ ಎಂದಿದ್ದಾರೆ. ಈ ವೇಳೆ, ಸೆಟ್‌ನಲ್ಲಿ ದರ್ಶನ್‌ರನ್ನು ಭೇಟಿಯಾಗಿರೋದಾಗಿ ತಿಳಿಸಿದ್ದಾರೆ.
ಮಿಲನಾ ಪ್ರಕಾಶ್ (Milana Prakash) ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಶರ್ಮಿಳಾ ಅಷ್ಟೇ ಅಲ್ಲ, ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿ ವಿನಯ್ ಗೌಡ ‘ದಿ ಡೆವಿಲ್’ ಶೂಟಿಂಗ್‌ನಲ್ಲಿ ಭಾಗಿಯಾಗಿದ್ರು. ‘ಡೆವಿಲ್’ನಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.
ಇನ್ನೂ ಈ ಹಿಂದೆ ‘ನವಗ್ರಹ’ (Navagraha) ಸಿನಿಮಾದಲ್ಲಿ ದರ್ಶನ್ (Darshan) ಜೊತೆ ಶರ್ಮಿಳಾ ತೆರೆಹಂಚಿಕೊಂಡಿದ್ದರು. ಇದೀಗ 2ನೇ ಬಾರಿ ದರ್ಶನ್ ಜೊತೆ ನಟಿ ಸಿನಿಮಾ ಮಾಡ್ತಿದ್ದಾರೆ.