‘ಗಾಳಿಪಟ 2′ (Galipata 2) ಬೆಡಗಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರು ಮೋಹಕತಾರೆ ರಮ್ಯಾ (Ramya) ಜೊತೆ ಲಂಡನ್ (London) ಹಾರಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಶರ್ಮಿಳಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
‘ಸಜನಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಬೆಡಗಿ ಶರ್ಮಿಳಾ ಮಾಂಡ್ರೆ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ‘ಗಾಳಿಪಟ 2’ ಸಿನಿಮಾದಲ್ಲಿ ನಾಯಕಿಯಾಗಿ ಶರ್ಮಿಳಾ ಗಮನ ಸೆಳೆದರು. ಇದೀಗ ತಮ್ಮದೇ ನಿರ್ಮಾಣ (Sharmiela Mandre Productions) ಸಂಸ್ಥೆ ಮೂಲಕ ಹೊಸ ಬಗೆಯ ಕಥೆಗಳನ್ನ ನಿರ್ಮಾಣ ಮಾಡ್ತಿದ್ದಾರೆ. ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿದ್ದಾರೆ.
ಸದ್ಯ ನಟಿ ಶರ್ಮಿಳಾ, ಮೋಹಕ ತಾರೆ ಜೊತೆ ಲಂಡನ್‌ಗೆ ಹಾರಿದ್ದಾರೆ. ಸಿನಿಮಾ ಕೆಲಸದ ನಡುವೆ ಸ್ನೇಹಿತೆ ರಮ್ಯಾ ಜೊತೆ ಒಂದೊಳ್ಳೆಯ ಸಮಯ ಕಳೆಯುತ್ತಿದ್ದಾರೆ. ಈ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆ ಅಧಿಕೃತ ಮಾಹಿತಿಯನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:Exclusive: ‘ಭೀಮ’ ಚಿತ್ರೀಕರಣದ ವೇಳೆ ದುನಿಯಾ ವಿಜಯ್ ಕಾಲಿಗೆ ಪೆಟ್ಟು
ಲೂಸಿಯಾ ಹೀರೋ ಸತೀಶ್ ಜೊತೆ ‘ದಸರಾ’ ಎಂಬ ಸಿನಿಮಾದಲ್ಲಿ ಶರ್ಮಿಳಾ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನ ನಟಿ ಶರ್ಮಿಳಾ ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ಹೊಸ ಸಿನಿಮಾಗೆ ನಟಿ ಕೈಹಾಕಿದ್ದಾರೆ. ಅದಕ್ಕಾಗಿಯೇ ಶೂಟಿಂಗ್‌ಗಾಗಿ ಲಂಡನ್‌ಗೆ ಹಾರಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಶರ್ಮಿಳಾಗೆ ರಮ್ಯಾ ಕೂಡ ಸಾಥ್ ನೀಡಿದ್ದಾರೆ. ಆದರೆ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ, ರಮ್ಯಾ ಅವರು ಚಿತ್ರೀಕರಣ ಭೇಟಿ ಕೊಟ್ಟಿರೋದಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯದಲ್ಲೇ ತಮ್ಮ ನಿರ್ಮಾಣದ ಹೊಸ ಸಿನಿಮಾ ಬಗ್ಗೆ ಶರ್ಮಿಳಾ, ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ.
ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್ ಟಿವಿ ಡಿಜಿಟಲ್