ಸುಳ್ಳು ಭರವಸೆ ನೀಡಬೇಡಿ – ಫಸ್ಟ್ ಟೈಂ ಮನಸ್ಸಿನಾಳದ ನೋವನ್ನ ಬಹಿರಂಗಗೊಳಿಸಿದ ಶಾನ್ವಿ

Public TV
2 Min Read
shanvi

ಬೆಂಗಳೂರು: ಚಂದನವನದ ಬೇಡಿಕೆಯ ನಟಿ ಮುದ್ದು ಚೆಲುವೆ ಶಾನ್ವಿ ಶ್ರೀವಾಸ್ತವ್ ತಮ್ಮ ಕೆಲ ಮಾತುಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಒಳ್ಳೆಯ ಸಿನಿಮಾವನ್ನು ಯಾರು ನೋಡಲು ಇಷ್ಟಪಡುವುದಿಲ್ಲ? ಒಳ್ಳೆಯದು, ಆದರೆ ಪ್ರೇಕ್ಷಕರಿಗೆ ಉತ್ತಮ ಸಿನಿಮಾ ಮಾಡಲು ಯಾರು ಬಯಸುವುದಿಲ್ಲ? ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಕ್ರೀಡೆಯಲ್ಲಿ ಸೋಲು ಅಥವಾ ಗೆಲುವು ಹೊರತಾಗಿಯೂ ಪ್ರತಿಯೊಬ್ಬರು ಅತ್ಯುತ್ತಮವಾದ ಆಟವನ್ನು ನೀಡುತ್ತಾರೆ. ಆದ್ದರಿಂದ ಎಲ್ಲರೂ ಉತ್ತಮ ಸಿನಿಮಾ ಮಾಡುವಾಗ ಮುಖ್ಯವಾಗಿ ಕೆಲಸದ ನೀತಿ, ಪ್ರಾಮಾಣಿಕತೆಗೆ ಪ್ರಾಮುಖ್ಯತೆ ನೀಡಬೇಕೆಂದು ನಾನು ವಿನಮ್ರದಿಂದ ಮನವಿ ಮಾಡಿಕೊಳ್ಳುತ್ತೇನೆ.

shanvi hot photoshoot images cover

ಪ್ರತಿಯೊಬ್ಬ ಕಲಾವಿದನೂ ಸಿನಿಮಾದ ಒಂದು ಭಾಗವಾಗಿರುತ್ತಾರೆ. ಅದನ್ನು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಬೇಕು. ಅದೇ ರೀತಿ ಸ್ಕ್ರಿಪ್ಟ್ ಪರದೆಯ ಮೇಲೆ ಚಿತ್ರಿಸಲ್ಪಡುವ ರೀತಿಯಲ್ಲಿಯೇ ಇರಬೇಕು. ಒಂದು ವೇಳೆ ಯಾವುದೇ ಬದಲಾವಣೆಗಳನ್ನು ಮಾಡಿದರೆ, ಅದನ್ನು ಕಲಾವಿದರಿಗೆ ತಿಳಿಸಬೇಕು. ಓರ್ವ ಕಲಾವಿದ ಸಿನಿಮಾದ ಹೊಸತನ್ನು ಅರ್ಥಮಾಡಿಕೊಳ್ಳುತ್ತಾನೆ. ಜೊತೆಗೆ ಅದು ನಿಜವಾದರೆ ಬದಲಾವಣೆಯನ್ನು ಗೌರವಿಸುತ್ತಾನೆ. ಅದರೆ ನಟನನ್ನು ದಾರಿ ತಪ್ಪಿಸುವುದು ಅನೈತಿಕವಾಗುತ್ತದೆ. ಇದಲ್ಲದೆ ಸುಳ್ಳು ಆಶ್ವಾಸನೆಗಳನ್ನು ನೀಡುವುದು ಬೇಡ. ಎಲ್ಲರೂ ಅತ್ಯುತ್ತಮವಾದ ಸಿನಿಮಾವನ್ನು ನೀಡೋಣ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಾನ್ವಿ, ನನ್ನಲ್ಲಿ ಹುದುಗಿಕೊಂಡಿದ್ದ ಕೆಲ ಮಾತುಗಳನ್ನು ಇಂದು ಹಂಚಿಕೊಂಡಿದ್ದೇನೆಯೇ ಹೊರತು ಯಾರನ್ನು ದೂರುತ್ತಿಲ್ಲ. ಸಿನಿಮಾ ಅಂಗಳದಲ್ಲಿ ಈ ರೀತಿಯ ಸನ್ನಿವೇಶಗಳನ್ನು ಹಲವು ನಟಿಯರು ಸೇರಿದಂತೆ ಕಲಾವಿದರು ಎದುರಿಸುತ್ತಾರೆ. ಹಾಗಾಗಿ ನನ್ನ ವೈಯಕ್ತಿಕ ಕೆಲ ಅಭಿಪ್ರಾಯಗಳನ್ನು ಬರೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

file6xkxvz7dsqe1gmcxqk10 1552067620

ಇಂದು ನನಗೆ ತೋಚಿದ ಕೆಲವು ಸಾಲುಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದೇನೆ. ಸದ್ಯ ನಾನು ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೇನೆ. ನಟಿಯರು ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬರಲ್ಲ, ವೃತ್ತಿಪರತೆಯನ್ನು ಹೊಂದಿರಲ್ಲ ಎಂದು ಹಲವರು ದೂರುತ್ತಾರೆ. ಆದ್ರೆ ನಟಿಯರು ಸಹ ಸಿನಿಮಾದ ಒಂದು ಭಾಗವಾಗಿ ಇರ್ತಾರೆ ಎಂದು ಯಾರೂ ತಿಳಿದುಕೊಳ್ಳಲ್ಲ. ಸಿನಿಮಾ ಚಿತ್ರೀಕರಣ ಯಾವ ಹಂತದಲ್ಲಿದೆ? ಡಬ್ಬಿಂಗ್ ನಡೆಯುತ್ತಿದ್ದೆಯಾ? ಯಾವ ವಿಷಯಗಳನ್ನು ಸಹ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಲ್ಲ. ನಟರಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನ ನಮಗೆ ನೀಡಲ್ಲ ಎಂಬ ಬೇಸರದ ನುಡಿಗಳನ್ನ ಕೆಲವು ಸಾಲುಗಳಲ್ಲಿ ಬಹಿರಂಗ ಪಡಿಸಿದ್ದೇನೆ. ಚಿತ್ರರಂಗದಲ್ಲಿ ನನ್ನೊಬ್ಬಳಿಗೆ ಈ ರೀತಿ ಆಗಿಲ್ಲ. ಹಲವರು ಈ ಸಮಸ್ಯೆಯನ್ನು ಎದುರಿಸಿದ್ದಾರೆ. ನಮ್ಮನ್ನು ದೂರುವುದಕ್ಕಿಂತ ಅವಕಾಶಗಳನ್ನು ನೀಡಿದ್ರೆ ನಾವು ಏನು ಎಂಬುದನ್ನ ತೋರಿಸುತ್ತೇವೆ ಎಂದು ತಿಳಿಸಿದರು.

Shanvi Srivastava

ಚಂದ್ರಲೇಖಾ, ರೌಡಿ, ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾಂಗ ಜಾಣ, ತಾರಕ್, ಗೀತಾ ಸೇರಿದಂತೆ ಹಲವು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾನ್ವಿ ಶ್ರೀವಾಸ್ತವ್ ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಬೇಡಿಕೆಯ ನಟಿಯಾಗಿದ್ದು, ಕಳೆದ ವಾರ ಶಾನ್ವಿ ನಟನೆಯ ಗೀತಾ ಸಿನಿಮಾ ಬಿಡುಗಡೆಗೊಂಡಿತ್ತು. ಸದ್ಯಕ್ಕೆ ತಮ್ಮ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

https://www.instagram.com/p/B3Ji3qMpmNy/

Share This Article
Leave a Comment

Leave a Reply

Your email address will not be published. Required fields are marked *