ತಮಿಳಿನ ಖ್ಯಾತ ಕಿರುತೆರೆ ನಟಿ (Actress) ಶಾಲಿನಿ (Shalini) ಡಿವೋರ್ಸ್ ಫೋಟೋಶೂಟ್ ಕಾರಣದಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಡಿವೋರ್ಸ್ (Divorce) ಆದ ಸಂಭ್ರಮವನ್ನು ಅವರು ನಾನಾ ರೀತಿಯಲ್ಲಿ ಪ್ರಕಟಿಸಿದ್ದರು. ಕೆಲವರು ಈ ಫೋಟೋಶೂಟ್ (Photoshoot)ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರೆ, ಇನ್ನೂ ಹಲವರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗಾದರೆ, ಈ ಶಾಲಿನಿ ಯಾರು? ಯಾರನ್ನು ಮದುವೆಯಾಗಿದ್ದರು ಎನ್ನುವ ಕುರಿತು ಸಾಕಷ್ಟು ಜನ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ.
ಶಾಲಿನಿ ಹಲವು ವರ್ಷಗಳಿಂದ ತಮಿಳಿನ ಕಿರುತೆರೆಯಲ್ಲಿ ನಟಿಯಾಗಿ ಸಕ್ರೀಯರಾಗಿದ್ದಾರೆ. ಸಾಕಷ್ಟ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರೂ, ಫೇಮಸ್ ಆಗಿದ್ದು ‘ಮುಲ್ಲಮ್ ಮರುಲಮ್’ ಧಾರಾವಾಹಿ ಮೂಲಕ. ಮೂರು ವರ್ಷಗಳ ಹಿಂದೆಯಷ್ಟೇ ರಿಯಾಜ್ (Riyaz) ಎನ್ನುವವರ ಜೊತೆ ಮದುವೆಯಾಗಿದ್ದರು. ತಮಗೆ ಗಂಡನಿಂದ ದೈಹಿಕ ಕಿರುಕುಳ ಆಗುತ್ತಿದೆ ಎಂದು ಆರೋಪ ಮಾಡಿದ್ದರು. ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಹಲವು ವಿಚಾರಗಳನ್ನೂ ಅವರು ಹಂಚಿಕೊಂಡಿದ್ದರು.
ಶಾಲಿನಿ ಮತ್ತು ರಿಯಾಜ್ ದಂಪತಿಗೆ ಒಂದು ಮಗು ಕೂಡ ಇದೆ. 2020 ಜೂನ್ ಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಕೇವಲ ಎರಡೂವರೆ ವರ್ಷದಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಇದೀಗ ಶಾಲಿನಿ ರಿಯಾಜ್ ಅವರಿಂದ ವಿಚ್ಚೇದನ ಪಡೆದುಕೊಂಡಿದ್ದು ,ಆ ಸಂಭ್ರಮವನ್ನು ಫೋಟೋಶೂಟ್ ಮೂಲಕ ವ್ಯಕ್ತ ಪಡಿಸಿದ್ದರು. ಆ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು.
ಫೋಟೋಗಾಗಿ ನಾನಾ ಬಗೆಯಲ್ಲಿ ಪೋಸ್ ಕೊಟ್ಟಿರುವ ಶಾಲಿನಿ, ರೆಡ್ ಸ್ಲಿಟ್ ಡ್ರೆಸ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಎಂಬ ಬೋರ್ಡ್ ಕೂಡ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಜೀವಕ್ಕೆ ಅಂತ್ಯ ಹಾಡುವ ಬದಲು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದು ಒಳ್ಳೆದು ಎಂಬ ಸಲಹೆಯನ್ನೂ ನೀಡಿದ್ದಾರೆ.
ನಮ್ಮ ಜೀವನದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ನಾವೇ ನಿರ್ಧಾರ ಮಾಡಬೇಕು. ಸಹ್ಯವಲ್ಲದ ದಾಂಪತ್ಯ ಮುರಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಜೀವನದಲ್ಲಿ ಎಲ್ಲರೂ ಖುಷಿಯಾಗಿ ಇರಬೇಕು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಮಗಳನ್ನು ಹೇಗೆ ಬೆಳೆಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನಾನು ಧೈರ್ಯದಲ್ಲಿದ್ದೇನೆ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ನಟಿಯೊಬ್ಬರು ಈ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ವಿಚ್ಚೇದನವನ್ನು ಸೆಲೆಬ್ರೇಟ್ ಮಾಡಿರುವುದಕ್ಕೆ ನಾನಾ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ ಅಭಿಮಾನಿಗಳು. ಒಂದಷ್ಟು ಜನ ಶಾಲಿನಿ ಪರವಾಗಿ ಮಾತನಾಡಿದ್ದರೆ, ಮತ್ತಷ್ಟು ಜನ ಶಾಲಿನ ಈ ನಡೆಯನ್ನು ಪ್ರಶ್ನಿಸಿದ್ದಾರೆ.