ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ (Amruthadaare) ಸೀರಿಯಲ್ ಮೂಲಕ ಗಮನ ಸೆಳೆದ ಸಾರಾ ಅಣ್ಣಯ್ಯ (Sara Annaiah) ಅವರು ಸದ್ಯ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಎದೆಯ ಗೀಟು ಕಾಣುವಂತೆ ಸಖತ್ ಬೋಲ್ಡ್ ಆಗಿ ಸಾರಾ ಕಾಣಿಸಿಕೊಂಡಿದ್ದಾರೆ.
Advertisement
ಸಾರಾ ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಕಡಲ ತೀರದ ರೆಸಾರ್ಟ್‌ವೊಂದರಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ‘ನಾನು ದಾಲ್ಚಿನ್ನಿಯಂತೆ ಸ್ವೀಟ್’ ಅಂತ ಕ್ಯಾಪ್ಷನ್ ನೀಡಿ, ಸಾರಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಸಾರಾ ಲುಕ್ ನೋಡಿ ಹಾಟ್, ಕ್ಯೂಟ್, ಸೆಕ್ಸಿ ಅಂತೆಲ್ಲಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ.
Advertisement
Advertisement
‘ನಮ್ಮೂರ ಹೈಕ್ಳು’ ಚಿತ್ರದ ಮೂಲಕ ನಾಯಕಿಯಾಗಿ ಸಾರಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಮೊದಲ ಸಿನಿಮಾ ಅವರ ಕೈಹಿಡಿಯಲಿಲ್ಲ. ಚಿತ್ರರಂಗದಿಂದ ಈಗ ಹೇಳಿಕೊಳ್ಳುವಂತಹ ಅವಕಾಶ ಕೂಡ ಸಿಗುತ್ತಿಲ್ಲ. ಹಾಗಾಗಿ ಕಿರುತೆರೆಯಲ್ಲಿ ನಟಿ ಗುರುತಿಸಿಕೊಳ್ತಿದ್ದಾರೆ.
Advertisement
ರಂಜನಿ ರಾಘವನ್- ಕಿರಣ್ ನಟನೆ ‘ಕನ್ನಡತಿ’ ಸೀರಿಯಲ್ ವರೂಧಿನಿ ಪಾತ್ರದಲ್ಲಿ ಸಾರಾ ನಟಿಸಿದ್ದರು. ಇದು ಕೂಡ ಲೀಡ್ ಪಾತ್ರವೇ ಆಗಿತ್ತು. ಹೀರೋ ಹಿಂದೆ ಬೀಳುವ ಪಾತ್ರ ಇದಾಗಿದೆ. ಇದನ್ನೂ ಓದಿ:ಅಬ್ಬಬ್ಬಾ! ಗೋಲ್ಡ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ ‘ಐರಾವತ’ ನಟಿ
ಈಗ ಜನಪ್ರಿಯ ‘ಅಮೃತಧಾರೆ’ ಸೀರಿಯಲ್‌ನಲ್ಲಿ ಹೀರೋ ಗೌತಮ್ ತಂಗಿ ಮಹಿಮಾ ಪಾತ್ರದ ಮೂಲಕ ಸಾರಾ ಗುರುತಿಸಿಕೊಳ್ತಿದ್ದಾರೆ. ಸಾರಾ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಸೀರಿಯಲ್‌ನಲ್ಲಿ ಹಲವು ಟ್ವಿಸ್ಟ್‌ಗಳನ್ನು ಪಡೆದು ಮುನ್ನುಗ್ಗುತ್ತಿದೆ. ಇದನ್ನೂ ಓದಿ:ಸಕ್ಸಸ್‌ಗಾಗಿ ಮತ್ತೆ ಮರಾಠಿ ಸಿನಿಮಾಗಳತ್ತ ರಿತೇಶ್ ದೇಶ್‌ಮುಖ್
ಅಂದಹಾಗೆ, ಅಮೃತಧಾರೆ ಸೀರಿಯಲ್‌ಗೆ ಎಂಟ್ರಿ ಕೊಡುವ ಮೂಲಕ ‘ನಮ್ಮ ಲಚ್ಚಿ’ ಸೀರಿಯಲ್‌ನಲ್ಲಿ ಸಾರಾ ನಟಿಸುತ್ತಿದ್ದರು. ನೆಗೆಟಿವ್ ಶೇಡ್‌ನಲ್ಲಿದ್ದ ಈ ಪಾತ್ರವನ್ನು ಕೆಲ ತಿಂಗಳುಗಳ ಹಿಂದೆ ಬಿಟ್ಟು `ಅಮೃತಧಾರೆ’ ತಂಡ ಸೇರಿಕೊಂಡರು ನಟಿ ಸಾರಾ.